ಬೆಂಗಳೂರು: ಬಿಜೆಪಿ ಮಂಡ್ಯ ಜಿಲ್ಲೆಗೆ ಕಾಲಿಟ್ಟ ಬಳಿಕ ಕೋಮುಗಲಭೆ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (B K Hariprasad) ಹೇಳಿದ್ದಾರೆ.
ನಗರದಲ್ಲಿ ನಾಗಮಂಗಲ (Nagamangala) ಕೋಮುಗಲಭೆ ವಿಚಾರವಾಗಿ ಮಾತನಾಡಿದ ಅವರು, ಕೋಮುಗಲಭೆಗೆ ಮಂಡ್ಯ ಜನ ಆಸ್ಪದ ಕೊಡುತ್ತಿರಲಿಲ್ಲ. ಬಿಜೆಪಿ ಮಂಡ್ಯ ಜಿಲ್ಲೆಗೆ ಕಾಲಿಟ್ಟ ಬಳಿಕ ಕೋಮು ಗಲಭೆ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಈಗ ಯಶಸ್ವಿ ಆಗಿರಬಹುದು. ಯಾರೇ ಆಗಿರಲಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾನೂನು ಚೌಕಟ್ಟು ಮೀರಿ ಹೋದವರಿಗೆ ಸರಿಯಾದ ಬುದ್ದಿ ಕಲಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಸಿಎಂ (CM Siddaramaiah) ಅವರಿಗೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಆಕಸ್ಮಿಕ ಪದ ಬಳಸಿ ಅನ್ಯಕೋಮಿನವರಿಗೆ ಬೆಂಬಲ – ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದ ಯತ್ನಾಳ್
Advertisement
Advertisement
ಸರ್ಕಾರಕ್ಕೂ ತುಷ್ಟೀಕರಣಕ್ಕೂ ಸಂಬಂಧವೇ ಇಲ್ಲ. ಯಾವ ಕಾಲಕ್ಕೆ ಯಾವ ರೀತಿ ಬಣ್ಣ ಬದಲಾಯಿಸಬೇಕೆಂದು ಗೋಸುಂಬೆ ರೀತಿಯಲ್ಲಿ ಬಣ್ಣ ಬದಲಾಯಿಸಿಕೊಂಡು ಮಾತಾಡುವುದು ಸರಿಯಲ್ಲ. ಇದು ಸರ್ಕಾರದ ವೈಫಲ್ಯ ಅಲ್ಲ. ಕೆಲ ಸಂಘಟನೆಗಳೇ ಕೋಮುಗಲಭೆ ಮಾಡಲು ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಯಾವುದೇ ಕೋಮುಗಲಭೆಯನ್ನು ಸಣ್ಣದು ಎಂದು ತೆಗೆದುಕೊಳ್ಳಬಾರದು. ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಬೇಕು ಎಂದು ಗೃಹ ಸಚಿವರಲ್ಲಿ (Home Minister) ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ನಾಗಮಂಗಲದ ಘಟನೆ ಕಿಡಿಗೇಡಿಗಳ ಕೆಲಸ, ಹೆಚ್‌ಡಿಕೆ ಕಡ್ಡಿ ಗೀರುವುದು ಬೇಡ: ಬಾಲಕೃಷ್ಣ