ಇಸ್ಲಾಮಾಬಾದ್: ಇದೇ ಮೊದಲಬಾರಿಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ಭಾರತದಲ್ಲಿ ವಿಶ್ವಕಪ್ ಟೂರ್ನಿ (ICC WorldCup) ಆಯೋಜನೆಗೊಂಡಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಇಂತಹ ಹೊತ್ತಿನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ಭಾರತವನ್ನು ಶತ್ರುಗಳ ದೇಶ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.
We Gave Them A Warm Welcome But Trust Me I Feel Really Guilty About it cz They Can’t digest This. Their Chairman Saying “Dushman Mulk” To India. Agr hum dushmani krne aae na to bhul mat Jana tumhari Puri cricket team hindustan mei hai????#ICCWorldCuppic.twitter.com/S5Fng2YVXZ
— Tas ???????? (@TasneemKhatai1) September 28, 2023
Advertisement
ನಾಯಕ ಬಾಬರ್ ಆಜಂ (Babar Azam) ನೇತೃತ್ವದ ತಂಡ ಸೆಪ್ಟೆಂಬರ್ 27ರ ಬುಧವಾರ ರಾತ್ರಿ ಹೈದರಾಬಾದ್ಗೆ (Hyderabad) ಬಂದಿಳಿದಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಕ್ರಿಕೆಟ್ ಉತ್ಸಾಹಿಗಳು ಅವರನ್ನು ಸಾಂಪ್ರದಾಯಿಕವಾಗಿ ಶಾಲು ಹಾಕಿ ಸ್ವಾಗತಿಸಿದ್ದಾರೆ. ಬಾಬರ್ ಮತ್ತು ಶಾಹೀನ್ ಶಾ ಅಫ್ರಿದಿ (Shaheen Afridi) ಇನ್ನೂ ಮೊದಲಾದ ಆಟಗಾರರು ತಮ್ಮ ಜಾಲತಾಣ ಖಾತೆಗಳಲ್ಲಿ ಭಾರತದಲ್ಲಿ ತಮಗೆ ಸಿಕ್ಕ ಸ್ವಾಗತವನ್ನು ಶ್ಲಾಘಿಸಿದ್ದಾರೆ. ಇಂತಹ ಹೊತ್ತಿನಲ್ಲಿ ಪಿಸಿಬಿ ಅಧ್ಯಕ್ಷ ನಾಲಿಗೆ ಹರಿಬಿಟ್ಟಿದ್ದಾರೆ.
Advertisement
Advertisement
ಪಾಕ್ ಆಟಗಾರರು ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಭೇಟಿ ನೀಡಿದ ದಿನವೇ ಪಿಸಿಬಿ ತನ್ನ ಆಟಗಾರರಿಗೆ ವೇತನ ಹೆಚ್ಚಳ ಘೋಷಣೆ ಮಾಡಿತು. ಈ ಲಾಭದಾಯಕ ಒಪ್ಪಂದದ ಕುರಿತು ಅಶ್ರಫ್ ಮಾತನಾಡುತ್ತಿದ್ದ ವೇಳೆ, ʻದುಷ್ಮನ್ ಮುಲ್ಕ್’ ಗೆ (ಶತ್ರುಗಳ ದೇಶಕ್ಕೆ) ನಮ್ಮ ಆಟಗಾರರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೀಡಿಯೋ ತುಣುಕು ಈಗ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್
Advertisement
Welcome to India, Babar Azam and Team Pakistan.#BabarAzam???? #PakistanCricketTeam pic.twitter.com/GCsuSjgobI
— Aarz-e-ishq (@Aarzaai_Ishq) September 28, 2023
ಈ ವೀಡಿಯೋದಲ್ಲಿ ಅಶ್ರಫ್, ನಾವು ಈ ಒಪ್ಪಂದಗಳನ್ನು ನಮ್ಮ ಆಟಗಾರರಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ನೀಡಿದ್ದೇವೆ. ಪಾಕಿಸ್ತಾನದ ಇತಿಹಾಸದಲ್ಲಿ ಆಟಗಾರರಿಗೆ ಇಷ್ಟು ಹಣವನ್ನು ನೀಡಿರಲಿಲ್ಲ. ಪಿಸಿಬಿಯ ಈ ಕ್ರಮದಿಂದಾಗಿ ವಿಶ್ವಕಪ್‌ಗಾಗಿ ಶತ್ರು ದೇಶಕ್ಕೆ (Dushman Mulk) ಹೋಗುವಾಗ ಆಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಅಶ್ರಫ್ ಹೇಳಿಕೆಗೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಂದಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಪಾಕಿಸ್ತಾನ ತಂಡವು (Pakistan Cricket Team) ಕೊನೆಯ ಬಾರಿ 2016ರಲ್ಲಿ ನಡೆದ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಆಗಮಿಸಿತ್ತು. ಇದಾದ 7 ವರ್ಷಗಳ ಬಳಿಕ ಮತ್ತೆ ಭಾರತದ ನೆಲಕ್ಕೆ ಪಾಕ್ ತಂಡ ಕಾಲಿಟ್ಟಿದೆ. ಈ ಬಾರಿ ಪಾಕಿಸ್ತಾನ ತಂಡವು ಹೈದರಾಬಾದ್, ಬೆಂಗಳೂರು, ಚೆನ್ನೈ, ಅಹಮದಾಬಾದ್ ಹಾಗೂ ಕೋಲ್ಕತ್ತಾ ಮೈದಾನಗಳಲ್ಲಿ ತನ್ನ ವಿಶ್ವಕಪ್ ಪಂದ್ಯಗಳನ್ನ ಆಡಲಿದೆ. ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಭ್ಯಾಸ ಪಂದ್ಯಗಳನ್ನಾಡಲಿದೆ. ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿ, ಬಟರ್ ಚಿಕನ್, ಲ್ಯಾಂಬ್ ಚಾಪ್ಸ್; ಭಾರತದಲ್ಲಿ ಪಾಕ್ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ
ಭಾರತದಲ್ಲಿ ಪಾಕ್ ತಂಡದ ವೇಳಾಪಟ್ಟಿ ಹೀಗಿದೆ…
ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ
Web Stories