ಬೆಂಗಳೂರು: ಕೋಟಿ ರೂ. ಸ್ಟೀಲ್ ಬ್ರಿಡ್ಜ್ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿ ಅದನ್ನು ಕೈಬಿಟ್ಟ ನಂತರ ಇದೀಗ ಸಚಿವ ಕೆಜೆ ಜಾರ್ಜ್ ಮತ್ತು ತಂಡ ಮತ್ತೊಂದು ಹೊಸ ಪ್ಲಾನ್ ಸಿದ್ಧಪಡಿಸಿದೆ.
ಕೆಂಪೇಗೌಡ ಲೇಔಟ್ ಮರು ನಿರ್ಮಾಣ ಹೆಸರಿನಲ್ಲಿ 1300 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಹೈಟೆಕ್ ಲೇಔಟ್ ನಿರ್ಮಾಣ ಹೆಸರಿನಲ್ಲಿ 1300 ಕೋಟಿ ಖರ್ಚು ಮಾಡಲು ಬಿಡಿಎ ನಿರ್ಧಾರ ಮಾಡಿದೆ. ಸ್ಟೀಲ್ ಬ್ರಿಡ್ಜ್ ಗುತ್ತಿಗೆ ಪಡೆದಿದ್ದ ಕಂಪನಿಗೆನೇ ಈ ಗುತ್ತಿಗೆಯನ್ನೂ ನೀಡೋ ಸಾಧ್ಯತೆಯಿದೆ.
Advertisement
ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಗುತ್ತಿಗೆಯನ್ನು ನಾಗಾರ್ಜುನ ಮತ್ತು ಎಲ್ ಅಂಡ್ ಟಿ ಕಂಪೆನಿ ಪಡೆದಿದ್ದವು. ಇದೀಗ ಇದೇ ಕಂಪೆನಿಗೆ ಏನಾದ್ರು ಗುತ್ತಿಗೆ ನೀಡಿದ್ರೆ ಗೋವಿಂದರಾಜ್ ಡೈರಿಯಲ್ಲಿನ ಅಂಶಗಳು ದೃಢವಾಗಲಿವೆ ಎಂದು ಹೇಳಲಾಗ್ತಿದೆ.
Advertisement
Advertisement
ಸ್ವತಃ ಬಿಡಿಎ ನಿರ್ಮಾಣ ಮಾಡಿರೋ ಬಹುತೇಕ ಲೇಔಟ್‍ಗಳಿಗೆ ಇನ್ನೂ ಮೂಲಭೂತ ಸೌಕರ್ಯ ನೀಡಿಲ್ಲ. ಜ.ಪಿ ನಗರ 9ನೇ ಹಂತ, ವಿಶ್ವೇಶ್ವರ ಲೇಔಟ್, ಅರ್ಕಾವತಿ ಲೇಔಟ್, ಬನಶಂಕರಿ 4ನೇ ಮತ್ತು 6ನೇ ಹಂತ ಹಾಗೂ ಇನ್ನೂ ಅನೇಕ ಲೇಔಟ್‍ಗಳಿಗೆ ಮೂಲಭೂತ ಸೌಕರ್ಯಕ್ಕೆ ಹಣ ಇಲ್ಲ ಎಂದು ಬಿಡಿಎ ಹೇಳಿದೆ. ಆದ್ರೆ ಕೇಂಪೇಗೌಡ ಲೇಔಟ್‍ಗೆ ಮಾತ್ರ ಹಣ ಹೊಂದಿಸಲು ನಿರ್ಧಾರ ಮಾಡಿದೆ. ನೌಕರರಿಗೆ ಸಂಬಳ ಕೊಡಲು ಹೆಣಗಾಡುತ್ತಿರೋ ಬಿಡಿಎ ಜಾರ್ಜ್‍ಗಾಗಿ 1300 ಕೋಟಿ ಖರ್ಚು ಮಾಡಲು ನಿರ್ಧಾರಿಸಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.