ಚೆನ್ನೈ: ಬಿಜೆಪಿ (BJP) ನಾಯಕರಾಗಿ ಬದಲಾದ ಹಲವರು ನಟಿಯರ ಬಗ್ಗೆ ಡಿಎಂಕೆ (DMK) ವಕ್ತಾರ ಸೈದಾಯಿ ಸಾಧಿಕ್ (Saidai Sadiq) ಆಕ್ಷೇಪಾರ್ಹ ಹೇಳಿಕೆ ನೀಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಬಿಜೆಪಿಯಲ್ಲಿರುವ ನಟಿ ಖುಷ್ಬು ಸುಂದರ್ (Khushbu Sundar), ನಮಿತಾ (Namitha), ಗೌತಮಿ (Gowthami), ಗಾಯತ್ರಿ ರಘುರಾಮ್‍ರನ್ನು ಐಟಂಗಳು ಎಂದು ಬಹಿರಂಗ ಸಮಾವೇಶವೊಂದಲ್ಲಿ ಸಾಧಿಕ್ ವ್ಯಾಖ್ಯಾನಿಸಿದ್ದಾರೆ.
ತಮಿಳುನಾಡಲ್ಲಿ ಬಿಜೆಪಿ ತಳವೂರುತ್ತಿದೆ ಎಂದು ಖುಷ್ಬು ಹೇಳ್ತಾರೆ. ಅಮಿತ್ ಶಾ (Amit Shah) ನೆತ್ತಿಯ ಮೇಲೆ ಕೂದಲಾದರೂ ಬರಬಹುದು ಆದ್ರೆ, ಇಲ್ಲಿ ಕಮಲದ ವಿಕಸನ ಆಗಲ್ಲ. ಡಿಎಂಕೆಯನ್ನು ನಾಶ ಮಾಡಿ ಬಿಜೆಪಿ ಬಲಿಷ್ಠಗೊಳಿಸಲು ಇಂತವರೆಲ್ಲ ನೆರವಾಗ್ತಾರಾ? ಖಂಡಿತವಾಗಲೂ ಸಾಧ್ಯವಿಲ್ಲ. ನನ್ನ ಬ್ರದರ್ ಇಳಯ ಅರುಣ ಖುಷ್ಬುರನ್ನು ಎಷ್ಟೋ ಬಾರಿ ಭೇಟಿ ಮಾಡಿದ್ರು. ಅಂದ್ರೆ ನಾನು ಹೇಳೋದು, ಆಕೆ ಡಿಎಂಕೆಯಲ್ಲಿದ್ದಾಗ (DMK) ಆರು ಬಾರಿ ಸಮಾವೇಶಗಳಲ್ಲಿ ಮೀಟ್ ಮಾಡಿದ್ರು ಎಂದು ನಾನಾರ್ಥ ಬರುವಂತೆ ಮಾತನಾಡಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?
- Advertisement
This foul mouthed , 3rd rate scoundrel uses filthy language against @khushsundar and other BJP women with a serving dmk minister on stage .They talk about feminism and self respect . @KanimozhiDMK ! pic.twitter.com/7wUl8oJsPA
— karthik gopinath (@karthikgnath) October 27, 2022
- Advertisement
ಸಾದಿಕ್ ಹೇಳಿಕೆ ಖಂಡಿಸಿ ಬಿಜೆಪಿ ಬೀದಿಗೆ ಇಳಿದಿದೆ. ನಟಿ ಖುಷ್ಬು ಟ್ವೀಟ್ ಮಾಡಿ, ಮಹಿಳೆಯರನ್ನು ಅಪಮಾನಿಸುವುದು ಹೊಸ ದ್ರಾವಿಡ ಮಾದರಿಯ ಭಾಗವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ನಾಯಕಿ ಕನಿಮೋಳಿ ಕ್ಷಮೆಯಾಚಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ, ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ರೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ನಾಯಕ ಸ್ಟಾಲಿನ್, ನನ್ನ ಪಕ್ಷ ಡಿಎಂಕೆ ಇದನ್ನು ಎಂದಿಗೂ ಕ್ಷಮಿಸಲ್ಲ ಎಂದು ಕನಿಮೋಳಿ (Kanimozhi) ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಹಿಳೆಯರನ್ನು ಐಟಂ ಎಂದು ಅವಹೇಳನಕಾರಿ ಎಂದು ಮುಂಬೈ ವಿಶೇಷ ಕೋರ್ಟ್ (Court) ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ