ಡಿವೋರ್ಸ್ ನಂತರ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಚಂದನ್, ನಿವೇದಿತಾ ನಟಿಸುತ್ತಾರಾ?

Public TV
2 Min Read
chandan shetty and niveditha gowda 1

ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ರೀಲ್ಸ್ ಮಾಡಿಕೊಂಡು ಚೆನ್ನಾಗಿದ್ದ ಈ ಜೋಡಿ ಡಿವೋರ್ಸ್ (Divorce) ಪಡೆದುಕೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ಒಪ್ಪಿಕೊಂಡಿದ್ದ ಪ್ರಾಜೆಕ್ಟ್‌ ಕಥೆಯೇನು? ಎಂಬು ಚಿತ್ರತಂಡಕ್ಕೆ ಕೂಡ ಚಿಂತೆ ಶುರುವಾಗಿದೆ. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿಯೂ ಚಂದನ್ ಮತ್ತು ನಿವೇದಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. 8 ದಿನಗಳ ಶೂಟಿಂಗ್ ಬಾಕಿಯಿರುವಾಗಲೇ ಈ ಜೋಡಿ ಡಿವೋರ್ಸ್ ಅನೌನ್ಸ್ ಮಾಡಿರೋದು ಚಿತ್ರತಂಡಕ್ಕೂ ಶಾಕ್‌ ಆಗಿದೆ. ಇದನ್ನೂ ಓದಿ:‘ಉತ್ತರಕಾಂಡ’ದ ವೀರವ್ವನಾಗಿ ನಟಿ ಭಾವನಾ ಮೆನನ್

chandan shetty and niveditha gowda 4

ಯುವ ನಿರ್ದೇಶಕ ಪುನೀತ್ ನಿರ್ದೇಶನದ ‘ಕ್ಯಾಂಡಿ ಕ್ರಶ್’ (Candy Crush) ಎಂಬ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಆಗಿ ಚಂದನ್ ಮತ್ತು ನಿವೇದಿತಾ ನಟಿಸುತ್ತಿದ್ದರು. ಮುಂದಿನ ವಾರದಿಂದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕೂಡ ಇತ್ತು. ಅಷ್ಟರಲ್ಲಿ ಈ ಜೋಡಿ ಬೇರೆ ಆಗಿರುವ ಸುದ್ದಿ ಅನೌನ್ಸ್ ಮಾಡಿರೋದು ಅಕ್ಷರಶಃ ಚಿತ್ರತಂಡಕ್ಕೂ ಶಾಕ್ ಕೊಟ್ಟಿದೆ. ಮುಂದೇನು? ಎಂಬ ಚಿಂತೆ ಕೂಡ ಶುರುವಾಗಿದೆ. ಆದರೆ ಈ ಸಂದರ್ಭದಲ್ಲಿಯೂ ಚಂದನ್ ಮತ್ತು ನಿವೇದಿತಾ ವೃತ್ತಿಪರತೆಯನ್ನು ಮೆರೆದಿದ್ದಾರೆ. ನಿವೇದಿತಾ ಗೌಡ ಸಿನಿಮಾದ ನಿರ್ದೇಶಕ ಪುನೀತ್‌ಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಲ್ಯಾನ್ ಪ್ರಕಾರವೇ, ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರಂತೆ.

Chandan Shetty

ಮುಂದಿನ ವಾರದಲ್ಲಿ ‘ಕ್ಯಾಂಡಿ ಕ್ರಶ್’ ಶೂಟಿಂಗ್ ಇದೆ. ಅದರ ಬಗ್ಗೆ ಮಾತಾನಾಡುವುದಕ್ಕೆ ಕಾಲ್ ಮಾಡಿದ್ದೆ. ಏನೂ ತಲೆ ಕೆಡಿಸಿಕೊಳ್ಳಬೇಡಿ. ಶೂಟಿಂಗ್‌ಗೆ ಬರುತ್ತೇವೆ. ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಇದರ ಬಗ್ಗೆ ಏನಾಗಿದೆ ಅನ್ನೋದು ನಮಗೆ ಗೊತ್ತಿಲ್ಲ. ಎಂದು ‘ಕ್ಯಾಂಡಿ ಕ್ರಶ್’ ನಿರ್ದೇಶಕ ಹೇಳಿದ್ದಾರೆ.

chandan shetty and niveditha gowda 3

‘ಕ್ಯಾಂಡಿ ಕ್ರಶ್’ ಸಿನಿಮಾದ ಒಟ್ಟು 8 ದಿನದ ಶೂಟಿಂಗ್ ಬಾಕಿ ಇದೆ. ಅದರಲ್ಲಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ 4 ದಿನಗಳಿವೆ. ಹೀಗಾಗಿ ಶೂಟಿಂಗ್ ಮುಗಿಸಿಕೊಡುತ್ತೇವೆ ಎಂದು ಹೇಳಿದ್ದಾರಂತೆ. ಇದೇ ತಿಂಗಳು ಜೂನ್ 14ರಿಂದ ಶೂಟಿಂಗ್ ಆರಂಭಿಸಲಿದೆ ಚಿತ್ರತಂಡ. ನಿವೇದಿತಾ ಗೌಡ ಅವರೇ ಫೋನ್ ಮಾಡಿದ್ದರು. ಟೆನ್ಷನ್ ಆಗುವಂತಹದ್ದು ಏನಿಲ್ಲ. ಚೆನ್ನಾಗಿಯೇ ಇದ್ದೇವೆ. ಇಬ್ಬರ ಒಪ್ಪಿಗೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದೇವೆ. ಶೂಟಿಂಗ್‌ನಲ್ಲಿ ಏನೂ ಸಮಸ್ಯೆ ಆಗಲ್ಲ. ನೀವು ಶೆಡ್ಯೂಲ್ ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅವರಿಗೆ ಮೊದಲೇ ಗೊತ್ತಿತ್ತು ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದು, ಆ ವಿಚಾರವಾಗಿ ಹೇಳುವುದಕ್ಕಂತಲೇ ಕಾಲ್ ಮಾಡಿದ್ದರು. ಸುದ್ದಿ ತಿಳಿದ ಬಳಿಕ ನಾವು ಸಿನಿಮಾ ಬಗ್ಗೆ ಟೆನ್ಷನ್ ಆಗುತ್ತೇವೆ ಎಂದು ಅವರು ತಿಳಿಸಿದ್ದಾರೆ ಎಂದು ನಿರ್ದೇಶಕ ಪುನೀತ್ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

Share This Article