Connect with us

Bengaluru City

ಡಿಸೆಂಬರ್ 19 ಡೇಂಜರ್ ಅಂತೆ-ಹೆಚ್‍ಡಿಕೆ, ಬಿಎಸ್‍ವೈ, ಮೋದಿ ಯಾರಿಗೆ ಡೇಂಜರ್?

Published

on

-ಡೇಂಜರ್ ಡಿಸೆಂಬರ್ 19ರ ರಹಸ್ಯ ಬಹಿರಂಗ

ಬೆಂಗಳೂರು: ಡಿಸೆಂಬರ್ 19 ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಡೇಂಜರ್ ಎಂದು ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯವಾಣಿ ನುಡಿದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಡಿಸೆಂಬರ್ 19ರ ಬಳಿಕ ಡೇಂಜರ್ ಅಂತೆ. ಡಿಸೆಂಬರ್ 19ರಿಂದ ಕುಮಾರಸ್ವಾಮಿಗೆ ಗುರು ಬದಲಾವಣೆ ಆಗಲಿದ್ದು, ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇಬೇಕು. ಅಂದ್ರೆ ಡಿಸೆಂಬರ್ 19ರ ನಂತರದ ದಿನಗಳು ಸಿಎಂಗೆ ಮುಳ್ಳಿನ ಹಾದಿ ಆಗಲಿದೆಯಂತೆ. ಶನಿ ಕಂಟಕ ಹೆಚ್ಚಾಗುವುದರಿಂದ ಎಚ್ಚರ ತಪ್ಪಿದ್ರೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಹಾಗಾಗಿ ಸಿಎಂ ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು ಎಂದು ದ್ವಾರಕನಾಥ್ ಗುರೂಜಿ ಸಲಹೆ ನೀಡಿದ್ದಾರೆ.

ಕುಮಾರಸ್ವಾಮಿ ಅವರು ದೊಡ್ಡ ನಾಯಕರಾಗಿದ್ದು, ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದನ್ನು ಬಿಡಬೇಕು. ಎಷ್ಟು ಶಾಂತ ಚಿತ್ತರಾಗಿ ಕೆಲಸ ಮಾಡುತ್ತಾರೋ ಅಷ್ಟೇ ಒಳ್ಳೆಯದಾಗುತ್ತದೆ. ದೊಡ್ಡ ನಾಯಕರು ಯಾರು ಹೆಚ್ಚಿನ ಮಾತನಾಡಿದವರಲ್ಲ. ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಪಕ್ಷದಿಂದ ಒಬ್ಬರೇ ಮಾತಾಡಬೇಕು. ಎಲ್ಲರು ತಮ್ಮ ಹೇಳಿಕೆಯನ್ನು ನೀಡುತ್ತಾ ಹೋದ್ರೆ ಗೊಂದಲ ಉಂಟಾಗುತ್ತದೆ. ಸಿಎಂ ಅವರ ಅಣ್ಣ, ತಮ್ಮ, ಮಕ್ಕಳು ಮಾತನಾಡೋದನ್ನು ನಿಲ್ಲಿಸಬೇಕು. ಇತ್ತ ಕಾಂಗ್ರೆಸ್ ನಿಂದಲೂ ಒಬ್ಬರೇ ಮಾತನಾಡಿದಾಗ ಮಾತ್ರ ಮೈತ್ರಿಯಲ್ಲಿ ಐಕ್ಯತೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನವರು ಬೆಂಬಲ ನೀಡಿದ ಮೇಲೆ ಕಿರುಕುಳ ಕೊಡಬಾರದು. ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಶಾಂತಿಯಿಂದ ಸರ್ಕಾರವನ್ನು ಮಾರ್ಚ್ 27ರವರೆಗೆ ತೆಗೆದುಕೊಂಡ ಹೋದ್ರೆ ಮಾತ್ರ ಮೈತ್ರಿಯ ಕಾರ್ಯಸಾಧನೆ ಆಗಲಿದೆ. ಕುಮಾರಸ್ವಾಮಿ ಅವರು ರಾಜ್ಯದ ನಾಯಕರಾಗಿದ್ದು, ಅತ್ಯಂತ ಶಾಂತಿಯಿಂದ ಕೆಲಸ ನಿರ್ವಹಿಸಬೇಕಿದೆ. ಆರೋಗ್ಯ ಸುಧಾರಣೆಗಾಗಿ ಸನ್ನತಿಯ ಚಂದ್ರಲಾಪುರ ದೇವಿಯ ದರ್ಶನ ಮಾಡಿಬರಬೇಕು. ಚಂದ್ರಲಾಪುರ ದೇವಿ ಮಾತ್ರ ಆರೋಗ್ಯ ಭಾಗ್ಯವನ್ನು ನೀಡಲಿದೆ ಎಂದ ಪಬ್ಲಿಕ್ ಟಿವಿ ಮೂಲಕ ಸಿಎಂ ಸಂದೇಶ ರವಾನಿಸಿದರು.

ಇತ್ತ ಡಿಸೆಂಬರ್ 19ರ ನಂತರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಶನಿ ದೂರವಾಗಲಿದೆಯಂತೆ. ಡಿಸೆಂಬರ್ 19ರಿಂದ ಯಡಿಯೂರಪ್ಪರಿಗೆಗೆ ಕಷ್ಟ, ಚಿಂತೆ ಕಡಿಮೆಯಾಗಿ ಶಾಂತಿ ನೆಲೆಸುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿದ್ದು, ಯಡಿಯೂರಪ್ಪನವರು ಮತ್ತೆ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಡಿಸೆಂಬರ್ 19ರ ಬಳಿಕ ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಾಗುತ್ತಂತೆ. ಡಿಸೆಂಬರ್ 19ರ ನಂತರ ಪ್ರಧಾನಿ ಮೋದಿ ಅವರು ಪ್ರತಿಯೊಂದು ನಿರ್ಣಯಗಳನ್ನು ಅತ್ಯಂತ ಯೋಚಿಸಿ ತೆಗೆದುಕೊಳ್ಳಬೇಕೆಂದು ಗುರೂಜಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *