ರಾಯಚೂರು: ಗುರು ಬದಲಾವಣೆಯಿಂದ ಡಿಸೆಂಬರ್ 19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾ ಬದಲಾವಣೆಯಾಗಲಿದೆ ಅಂತ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಸಿಎಂ ಕುಮಾರಸ್ವಾಮಿ ಗೆ ಗುರು ಬದಲಾವಣೆಯಿಂದ ಬಾರಿ ಕಂಟಕ ಕಾದಿದ್ದು ಮುಂದಿನದ್ದು ಮುಳ್ಳಿನ ಹಾದಿ ಅಂತ ಗುರೂಜಿ ಹೇಳಿದ್ದಾರೆ. ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇ ಬೇಕು. ಇಲ್ಲದಿದ್ದರೇ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕುಮಾರಸ್ವಾಮಿ ಮಾತಿನ ಮೇಲೆ ನಿಗಾ ಇರಬೇಕು. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸಿಎಂ ಖುರ್ಚಿಗೆ ಕಂಟಕ. ಉತ್ತಮ ಕುಟುಂಬದಿಂದ ಬಂದಿರುವ ಕುಮಾರಸ್ವಾಮಿಗೆ ಇನ್ನೂ ಶನಿ ಕಂಟಕ ಇದೆ ಅಂತ ಗುರೂಜಿ ಹೇಳಿದ್ದಾರೆ.
Advertisement
ಬಿಎಸ್‍ವೈ ಸೇಫ್:
ಡಿಸೆಂಬರ್ 19ರ ಬಳಿಕ ಮೋದಿಗೆ ಸಮಯ ಸರಿಯಿಲ್ಲ, ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಿದೆ ಅಂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ಆದ್ರೆ ಯಡಿಯೂರಪ್ಪ ನವರಿಗೆ ಗುರು ಪ್ರಭಾವ ಬೀರಲ್ಲ. ಶನಿ ದೂರವಾಗುತ್ತಿರುವುದರಿಂದ ಬಿಎಸ್‍ವೈಗೆ ಶಾಂತಿ ಜೀವನ ಲಭಿಸಲಿದೆ. ಡಿಸೆಂಬರ್ 19ರ ಬಳಿಕ ಯಡಿಯೂರಪ್ಪ ನವರ ಚಿಂತೆಗಳು ಕಡಿಮೆಯಾಗುತ್ತವೆ. ಈಗಾಗಲೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿರುವ ಬಿಎಸ್‍ವೈ ಗೆ ಉತ್ತಮ ದಿನಗಳು ಎದುರಾಗಲಿವೆ ಎಂದಿದ್ದಾರೆ.
Advertisement
Advertisement
ಡಿಕೆಶಿ ಸಿಎಂ ಆಗೋದು ಪಕ್ಕಾ:
ಶನಿಯ ಕಾಟವೂ ಇಲ್ಲದಿರುವುದರಿಂದ ಗುರು ಬದಲಾವಣೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಹೆಚ್ಚು ಬಲ ತರಲಿದೆ. ಮುಂದೆ ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ. ಗುರು ಬಲ ಹೆಚ್ಚುವುದರಿಂದ ಡಿ.ಕೆ.ಶಿವಕುಮಾರ್ ಎಷ್ಟೇ ಕಷ್ಟ ಬಂದರೂ ಎಲ್ಲಾ ಕಷ್ಟ ಎದುರಿಸುತ್ತಾರೆ. ತಮ್ಮ ಮಾತಿನ ಶೈಲಿ, ವರ್ತನೆಯನ್ನು ಅವರು ಬದಲಾಯಿಸಿಕೊಳ್ಳಬೇಕಿದೆ. ಗುರು ಬದಲಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇದ್ದರೆ ಯಾವ ಕೆಡುಕು ಉಂಟಾಗಲ್ಲ. ಡಿಕೆ ಶಿವಕುಮಾರ್ ಉಚ್ಛ ಸ್ಥಾಯಿಗೆ ಏರುತ್ತಾರೆ ಅನ್ನೋ ನನ್ನ ಮಾತು ಸುಳ್ಳಾಗಲ್ಲ. ಡಿಕೆಶಿ ವಿಚಾರದಲ್ಲಿ ನನ್ನ ಮೇಲೂ ಶೋಧ ನಡೆಯಿತು. ಗುರು ಬಲ ಚೆನ್ನಾಗಿರುವುದರಿಂದ ಎಂದೂ ಕೆಡುಕಾಗಲ್ಲ ಅಂತ ದ್ವಾರಕನಾಥ್ ಗುರೂಜಿ ತಿಳಿಸಿದರು.
Advertisement
ಗುರು ಪ್ರಭಾವ ಏನೆಲ್ಲಾ ಬೀರಿದೆ?
ಗುರು ಬದಲಾವಣೆ ಪರಿಣಾಮವಾಗಿ ಕೆಲ ಸಚಿವರ ವರ್ತನೆ ಬದಲಾಗಿದೆ. ಸಚಿವರು ಅಥವಾ ಕಾಂಗ್ರೆಸ್ ನ ಕೆಲ ಮುಖಂಡರಿಂದ ಸರ್ಕಾರಕ್ಕೆ ತೊಂದರೆಯಿದೆ. ಸಿಎಂ ಕುಮಾರಸ್ವಾಮಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ನಾನು ನೇರವಾಗಿ ಹೇಳುವುದಿಲ್ಲ. ಬದಲಾವಣೆಗಳ ಬಗ್ಗೆ ತುಂಬಾ ಎಚ್ಚರ ವಹಿಸಲೇ ಬೇಕು. ಡಿಸೆಂಬರ್ 19 ರಾಜ್ಯ ರಾಜಕಾರಣದ ಮಹತ್ವದ ದಿನ ಅಂತ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv