ಬೆಂಗಳೂರು: ದಸರಾ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ವಿರುದ್ಧ ಚಾರ್ಜ್‍ಶೀಟ್ ರಿಲೀಸ್ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ.
ಮೊದಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಮುಂದೆ ಚಾರ್ಜ್‍ಶೀಟ್ ಇಟ್ಟು ಚರ್ಚೆ ನಡೆದ ಬಳಿಕ ನಂತರ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ತಿಳಿಸಿದೆ.
Advertisement
ಚಾರ್ಜ್‍ಶೀಟ್ ಸ್ಕ್ವಾಡ್ ಟೀಂನಲ್ಲಿ 7 ಜನರಿದ್ದು, ಅವರೆಲ್ಲರೂ ಬಿಎಸ್‍ವೈ ಆಪ್ತರೆ ಆಗಿರುವುದು ವಿಶೇಷ. ಒಬ್ಬರು ಹಾಲಿ ಪರಿಷತ್ ಸದಸ್ಯ, ಒಬ್ಬರು ಹಾಲಿ ಶಾಸಕ, ಇಬ್ಬರು ಮಾಜಿ ಪರಿಷತ್ ಸದಸ್ಯರು, ಒಬ್ಬರು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಇಬ್ಬರು ಹಿರಿಯ ವಕೀಲರು ತಂಡದಲ್ಲಿ ಇದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.
Advertisement
ಯಾರ ಮೇಲೆ ಚಾರ್ಜ್‍ಶೀಟ್?
ಮೊದಲ ಹಂತದಲ್ಲಿ ಸಿದ್ದರಾಮಯ್ಯ, ಬೆಂಗಳೂರಿನ ಇಬ್ಬರು ಪ್ರಭಾವಿ ಸಚಿವರು ಮತ್ತು ಮತ್ತೊಬ್ಬರು ಮೈಸೂರು ಜಿಲ್ಲೆಯ ಸಚಿವರ ವಿರುದ್ಧ ದಾಖಲೆಗಳನ್ನು ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement
ದಸರಾಕ್ಕೆ ಮೊದಲೇ ಚಾರ್ಜ್‍ಶೀಟ್ ಬಿಡುಗಡೆ ಮಾಡಲಾಗುವುದು ಎಂದು ಬಿಎಸ್ ಯಡಿಯರೂಪ್ಪ ಈ ಹಿಂದೆ ಹೇಳಿದ್ದರು. ಆದರೆ ಕೆಲ ಅಧಿಕಾರಿಗಳು ದಾಖಲೆಯನ್ನು ನೀಡಲು ಸಹಕರಿಸದ ಹಿನ್ನೆಲೆಯಲ್ಲಿ ಚಾರ್ಜ್‍ಶೀಟ್ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಬಿಎಸ್‍ವೈ ತಿಳಿಸಿದ್ದರು.