ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಶನಿವಾರದ ಒಳಗಡೆ ದೆಹಲಿಯ ತುಘಲಕ್ ಲೇನ್‍ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ತೊರೆಯಲು ನಿರ್ಧರಿಸಿದ್ದಾರೆ.
ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಚಿವಾಲಯ ವಯನಾಡು ಲೋಕಸಭಾ ಕ್ಷೇತ್ರದಿಂದ ಅನರ್ಹ ಮಾಡಲಾಗಿತ್ತು. ಅನರ್ಹ ಮಾಡಿದ ಬಳಿಕ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ಸಾಧ್ಯವಿಲ್ಲದ ಕಾರಣ ಲೋಕಸಭೆಯ ವಸತಿ ಸಮಿತಿಯು ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿತ್ತು. ಇದ್ನನ್ನೂ ಓದಿ: ರಾಹುಲ್‌ಗೆ ಹಿನ್ನಡೆ – ಜೈಲು ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾ
Advertisement
Advertisement
ರಾಹುಲ್ ಗಾಂಧಿ ಆ ಬಂಗಲೆಯಲ್ಲಿ 2005ರಿಂದ ವಾಸವಾಗಿದ್ದರು. ಲೋಕಸಭೆಯ ವಸತಿ ಸಮಿತಿಯು ಭಾನುವಾರದ ಒಳಗಡೆ ಮನೆ ಖಾಲಿ ಮಾಡಲು ಗಡವು ನಿಗದಿಪಡಿಸಿತ್ತು
Advertisement
ಕೇಂದ್ರ ದೆಹಲಿಯ ಜನಪಥ್‍ನಲ್ಲಿರುವ ತಾಯಿ ಸೋನಿಯಾ ಗಾಂಧಿ ಅವರ ಬಂಗಲೆಗೆ ತೆರಳುವುದಾಗಿ ರಾಹುಲ್ ಗಾಂಧಿಯವರ ಕಚೇರಿ ತಿಳಿಸಿದೆ. ಅಲ್ಲದೆ ಕಳೆದ ವಾರ ಮನೆಯ ಸಾಮಾಗ್ರಿಗಳನ್ನು ಟ್ರಕ್‍ನಲ್ಲಿ ಸಾಗಿಸಿದ್ದು ಕಂಡು ಬಂದಿತ್ತು. ಇನ್ನೂ ಮನೆ ಖಾಲಿ ಮಾಡಲು ಒಪ್ಪಿಕೊಂಡಿರುವ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕರು ಮನೆಗಳ ಆಫರ್‌ಗಳನ್ನು ನೀಡಿದ್ದಾರೆ.
Advertisement
ಏನಿದು ಪ್ರಕರಣ?
ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ (Narendra Modi) ಇವೆರೆಲ್ಲರ ಉಪನಾಮ (Modi surname) ಒಂದೇ ಆಗಿದೆ. ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದಿದ್ದರು. ಇದರ ವಿರುದ್ಧ ಬಿಜೆಪಿ ಶಾಸಕ ಮತ್ತು ಗುಜರಾತ್ (Gujarat) ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.
ಮೋದಿ ಉಪನಾಮ ವಿಚಾರವಾಗಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್‍ನ (Surat) ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸೂರತ್ ಸೆಷನ್ಸ್ ಕೋರ್ಟ್ ತಿರಸ್ಕರಿಸಿತ್ತು. ಇದ್ನನ್ನೂ ಓದಿ: ಪಕ್ಷೇತರ ಅಭ್ಯರ್ಥಿಯ ಮೇಲೆ ದರ್ಪ ಮೆರೆದ ಬಿಜೆಪಿ ಶಾಸಕ