– ಸಹೋದರ ದಿನಕರ್, ಸ್ನೇಹಿತ ಧನ್ವೀರ್ ಶ್ಯೂರಿಟಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ನಟ ದರ್ಶನ್ (Darshan) ಸೋಮವಾರ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು. ಬಳಿಕ ಮತ್ತೆ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ತೆರಳಿದರು.
Advertisement
ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಾಂಡ್ ಸಲ್ಲಿಕೆ ಪ್ರಕ್ರಿಯೆ ನಡೆಸಲು ದರ್ಶನ್ ಆಸ್ಪತ್ರೆಯಿಂದ ನೇರವಾಗಿ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ದರ್ಶನ್‌ಗೆ ಸ್ನೇಹಿತ ಧನ್ವೀರ್ ಮತ್ತು ಸಹೋದರ ದಿನಕರ್ ಶ್ಯೂರಿಟಿ ನೀಡಿದರು. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆಯಿಂದ ಕೋರ್ಟ್‌ಗೆ ಆಗಮಿಸಿದ ದರ್ಶನ್
Advertisement
Advertisement
ಶ್ಯೂರಿಟಿ ವೇಳೆ, ದರ್ಶನ್ ನಿಮಗೆ ಏನಾಗಬೇಕು ಎಂದು ಜಡ್ಜ್ ಕೇಳಿದರು. ಅದಕ್ಕೆ, ಸ್ನೇಹಿತ ಮತ್ತು ಸಹೋದರ ಎಂದು ಧನ್ವೀರ್ ಮತ್ತು ದಿನಕರ್ ಹೇಳಿದರು. ಕೊನೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ದರ್ಶನ್ ಮತ್ತೆ ಆಸ್ಪತ್ರೆಗೆ ಹಿಂದಿರುಗಿದರು.
Advertisement
ಕೋರ್ಟ್ ಮುಂದೆ ಇನ್ನೂ ಅನಾರೋಗ್ಯ ಸಮಸ್ಯೆ ಇರುವಂತೆ ದರ್ಶನ್ ಬಿಂಬಿಸಿಕೊಂಡರು. ಕುಂಟುತ್ತಲೆ ಕೋರ್ಟ್‌ಗೆ ಆಗಮಿಸಿದರು. ಕೋರ್ಟ್ ಒಳಗೆ ನಿಲ್ಲಲು ಆಗುತ್ತಾ ಇಲ್ಲ ಎಂಬಂತೆ ತೋರಿಸಿಕೊಂಡರು. ಕುಳಿತುಕೊಂಡು ವಿಶ್ರಾಂತಿ, ಬಳಿಕ ಕೂರಲು ಆಗುತ್ತಾ ಇಲ್ಲ ಎಂಬಂತೆ ನಿಲ್ಲೋದು ಮಾಡಿದರು. ಕೋರ್ಟ್ ಹೊರಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜನ ಸೇರದಂತೆ ಸಿಟಿ ಸಿವಿಲ್ ಕೋರ್ಟ್ ಹೊರಭಾಗದಲ್ಲಿ ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಗೌಡ ರಿಲೀಸ್
ದರ್ಶನ್‌ಗೆ ಬುಧವಾರದ ವರೆಗೂ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. ಬಹುತೇಕ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಹೇಳಲಾಗಿದೆ. ವೈದ್ಯರ ಸಲಹೆ ಪಡೆದು ನಂತರ ದರ್ಶನ್ ಡಿಸ್ಚಾರ್ಜ್ ಆಗಲಿದ್ದಾರೆ.