ಸಿಯೋಲ್: ಚೀನಾ ಬಳಿಕ ಇದೀಗ ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಕಳೆದ ವಾರ ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಕೊರಿಯಾದ ಜನತೆಗೂ ಕೋವಿಡ್ ಭೀತಿ ಎದುರಾಗಿದೆ.
ದಕ್ಷಿಣ ಕೊರಿಯಾದಲ್ಲಿ ಬುಧವಾರ 4 ಲಕ್ಷ ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಭಾರೀ ಕೋವಿಡ್ ಕೇಸ್‌ಗಳು ಕಂಡುಬಂದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯ ಇಷ್ಟೊಂದು ಪ್ರಮಾಣದಲ್ಲಿ ಕೊವಿಡ್ ಕೇಸ್‌ಗಳನ್ನು ಎದುರಿಸುತ್ತಿದೆ.
Advertisement
ದಕ್ಷಿಣ ಕೊರಿಯಾದಲ್ಲಿ ಬುಧವಾರ 4,00,741 ಹೊಸ ಕೆಸ್‌ಗಳು ಪತ್ತೆಯಾಗಿದ್ದು, ಒಂದೇ ದಿನ 293 ಸಾವುಗಳು ಸಂಭವಿಸಿವೆ. ಪ್ರಸ್ತುತ ಕೋವಿಡ್ ಕೇಸ್‌ಗಳೊಂದಿಗೆ ಕೊರಿಯಾದಲ್ಲಿ ಇಲ್ಲಿಯವರೆಗೆ 76,29,275 ಪ್ರಕರಣಗಳು ಪತ್ತೆಯಾಗಿವೆ. ಇದನ್ನೂ ಓದಿ: ಚೀನಾದಲ್ಲಿ 2 ವರ್ಷಗಳ ಬಳಿಕ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್
Advertisement
Advertisement
ಚೀನಾದಲ್ಲಿ ಕೋವಿಡ್ ಹಾವಳಿ ಹೆಚ್ಚುತ್ತಿದ್ದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ. ಬುಧವಾರ ಚೀನಾದಲ್ಲಿ ಒಟ್ಟು 3,290 ಕೇಸ್‌ಗಳು ಪತ್ತೆಯಾಗಿವೆ. ಇದನ್ನೂ ಓದಿ: ಅಮೆರಿಕಗೆ ಮತ್ತೆ ಟಕ್ಕರ್ ಕೊಟ್ಟ ಸೌದಿ ಅರೇಬಿಯಾ- ಡಾಲರ್‌ಗೆ ಬಿಗ್ ಶಾಕ್?
Advertisement
ವಿಶ್ವದಲ್ಲೇ ಮೊದಲ ಬಾರಿಗೆ 2019ರಲ್ಲಿ ಚೀನಾದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತಾದರೂ ಕಳೆದ 1 ವರ್ಷದಿಂದ ಚೀನಾ ಅಧಿಕೃತವಾಗಿ ಕೋವಿಡ್ ಕೇಸ್‌ನಿಂದ ಸಾವು ಸಂಭವಿಸಿರುವ ಪ್ರಕರಣವನ್ನು ವರದಿ ಮಾಡಿಲ್ಲ.