ಬೆಂಗಳೂರು: ಗ್ಯಾರಂಟಿಗಳಿಂದ (Congress Guarantee) ರಾಜ್ಯಕ್ಕೆ ಆರ್ಥಿಕ ಆಪತ್ತು ಎದುರಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಕಾಂಗ್ರೆಸ್ (Congress) ಗರಂ ಆಗಿದೆ. ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎನ್ನುವುದು ಬಿಜೆಪಿ (BJP) ಆರೋಪ ಅಷ್ಟೇ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿದ್ದಾರೆ.
ನಾವು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿಯೇ ಗ್ಯಾರಂಟಿಗಳನ್ನು ನೀಡಿದ್ದೇವೆ. ಸಮಸ್ಯೆ ಎದುರಾದರೆ ಅದನ್ನು ನಿವಾರಿಸುವ ಹೊಣೆಯೂ ಕೂಡ ನಮ್ಮದೇ. ನಮಗೆ ಬಿಜೆಪಿಯವರ ಸಲಹೆ ಸೂಚನೆ ಬೇಕಾಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ದಾಳಿ – 2 ದಿನಗಳಲ್ಲಿ 2ನೇ ಅಟ್ಯಾಕ್!
ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಜೋಶಿ ಆರೋಪಕ್ಕೂ ಗೃಹಮಂತ್ರಿಗಳು ತಿರುಗೇಟು ನೀಡಿದ್ದಾರೆ. ಜೋಶಿಯವರು ಪತ್ರ ಬರೆಯಲಿ. ಅದಕ್ಕೆ ನಾವು ಯಾವ ರೀತಿ ಸ್ಪಂದಿಸುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಲಿದೆ ಎಂದು ಪರಮೇಶ್ವರ್ ಹೇಳಿದರು. ಇದನ್ನೂ ಓದಿ: SCSP – TSP ಯೋಜನೆಯ 14 ಸಾವಿರ ಕೋಟಿ ಹಣ ಕಾಂಗ್ರೆಸ್ ಗ್ಯಾರಂಟಿಗೆ ಬಳಕೆ