– ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಬಡಗಲಪುರ ನಾಗೇಂದ್ರ ಬ್ಯಾಟಿಂಗ್
ಚಾಮರಾಜನಗರ: ಚಾರ್ಜ್‌ಶೀಟ್ ಆದ್ಮೇಲೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ನಮ್ಮ ಸ್ಪಷ್ಟ ನಿಲುವು ತಿಳಿಸುತ್ತೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ (Badagalapura Nagendra) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಪ್ರಕರಣ ಸಂಬಂಧ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ರಾಜ್ಯಪಾಲರ ನಡೆಯನ್ನು ಕೋರ್ಟ್ ಒಪ್ಪಿದೆ, ಇಲ್ಲಾ ಅಂತಾ ಹೇಳ್ತಾಯಿಲ್ಲ. ಬೇರೆ ಅರ್ಜಿಗಳನ್ನು ತೆಗೆದುಕೊಳ್ಳದೇ ಬರಿ ಈ ಅರ್ಜಿಯನ್ನ ಮಾತ್ರ ಏಕೆ ತೆಗೆದುಕೊಂಡ್ರು? ಆದರೆ ಈ ನಡೆಯಲ್ಲಿ ಕೂಡ ರಾಜಕೀಯ ದಾಳವಿದೆ. ರಾಜ್ಯದ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆಯಿದೆ ಎಂದು ಪರೋಕ್ಷವಾಗಿ ಲೋಕಾಯುಕ್ತ ತನಿಖೆ ಪರ ಒಲವು ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್
ಚಾರ್ಜ್ಶೀಟ್ ಆದ ಮೇಲೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೊ ಬೇಡವೊ ಎಂಬುದರ ಬಗ್ಗೆ ನಮ್ಮ ಸ್ಪಷ್ಟ ನಿಲುವು ತಿಳಿಸುತ್ತೇವೆ. ಯಾವುದೇ ರಾಜ್ಯ ತನಿಖಾ ಸಂಸ್ಥೆಗಳು ರಿಪೋರ್ಟ್ನಲ್ಲಿ ಸತ್ಯಾಂಶವನ್ನ ಮುಚ್ಚಿ ಹಾಕಲು ಸಾದ್ಯವಿಲ್ಲ ಎಂದು ತಿಳಿಸಿದರು.
ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ವಿಚಾರವಾಗಿ ಮಾತನಾಡಿ, ಅದು ಕೂಡ ತನಿಖೆಯಾಗಬೇಕು. ಅವರನ್ನು ನಾವು ರಾಜೀನಾಮೆ ನೀಡಿ ಎಂದು ಕೇಳಲ್ಲ. ಬಾಂಡ್‌ಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅವ್ಯವಹಾರ ಮಾಡುತ್ತವೆ. ಅಧಿಕಾರದಲ್ಲಿ ಇರುವ ಪಕ್ಷ ಹೆಚ್ಚು ಬಾಂಡ್ ತೆಗೆದುಕೊಳ್ಳುತ್ತದೆ. ವಿರೋಧ ಪಕ್ಷಗಳಿಗೆ ಕಡಿಮೆ ಸಿಗುತ್ತೆ. ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳು ಕಾರ್ಪೊರೇಟ್‌ಗಳಿಂದ ನೆರವು ಪಡೆದುಕೊಳ್ಳುತ್ತವೆ. ಆದ್ದರಿಂದ ಎಲ್ಲಾ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಪರ ಇರುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಎಲ್ಲ ಪಕ್ಷಗಳೂ ಪಾರದರ್ಶಕವಾಗಿರಬೇಕು. ನಿರ್ಮಲಾ ಸೀತಾರಾಮನ್ ಆಗಿರಬಹುದು, ವಿಜಯೇಂದ್ರ ಆಗಿರಬಹುದು ಎಲ್ಲರ ವಿರುದ್ಧ ಇರುವ ದೂರುಗಳು ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ