ಕೊಪ್ಪಳ: ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಲ್ಲಿ `ಇಂದಿರಾ ಕ್ಯಾಂಟೀನ್’ ಗೆ ಇಂದು ಚಾಲನೆ ದೊರೆಯುತ್ತಿರುವ ಬೆನ್ನಲ್ಲೆ, 100 ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿ 66, ಪರಿಶಿಷ್ಟ 24, ಹಿಂದುಳಿದ ವರ್ಗಕ್ಕೆ ಸೇರಿರೋ 10 ವಸತಿ ಶಾಲೆಗಳು ಸೇರಿ ಒಟ್ಟು 100 ಮೊರಾರ್ಜಿ ದೇಸಾಯಿ ವಸತಿಗಳಿಗೆ `ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ’ಯೆಂದು ಮರುನಾಮಕರಣ ಮಾಡಿ ಆದೇಶಿಸಿದೆ.
ಇದಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮರುನಾಮಕರಣ ಮಾಡೋವಲ್ಲಿ ಉತ್ಸುಕರಾಗಿ, ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ-ಅಜ್ಜಿ ಹೆಸರಿನ ಕ್ಯಾಂಟೀನ್ ಮೊಮ್ಮಗನಿಂದ ಓಪನಿಂಗ್ https://t.co/o4kmXXNu74#IndiraCanteen #RahulGandhi #Congress pic.twitter.com/nDmq7o6KDU
— PublicTV (@publictvnews) August 16, 2017