ಬೆಂಗಳೂರು: ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಜೈಲಿನ ಅಧೀಕ್ಷಕರ ಕೊಠಡಿಯಲ್ಲಿ ಟಿವಿ ನೋಡುತ್ತಿದ್ದ ನಲಪಾಡ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಅಲ್ಲದೇ ಜೊತೆಯಲ್ಲಿದ್ದ ಸ್ನೇಹಿತರ ಮುಂದೆಯೇ ಜೋರಾಗಿ ಕೂಗಾಡಿದ್ದಾನೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.
ನನ್ನ ಹಣೆ ಬರಹವೇ ಸರಿ ಇಲ್ಲ ಎಂದು ಗೋಳಾಡುತ್ತಿರುವ ನಲಪಾಡ್, ಬೇಸರ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಅರ್ಜಿ ವಿಚಾರಣೆ ತೀರ್ಪು ಹೊರಬೀಳುತ್ತಿದ್ದಂತೆಯೇ ಕೋರ್ಟ್ ಆವರಣದಲ್ಲಿದ್ದ ನಲಪಾಡ್ ಬೆಂಬಲಿಗರು ನಿರಾಶೆಯಿಂದ ಹಿಂದಿರುಗಿದ್ದಾರೆ. ಆದ್ರೆ ಈ ಕುರಿತು ನಲಪಾಡ್ ತಂದೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement
Advertisement
ಪ್ರಕರಣ ಸಂಬಂಧ ಇತರೆ 6 ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕೂಡ ಕೋರ್ಟ್ ವಜಾಗೊಳಿಸಿದೆ. ಇದೊಂದು ಗಂಭೀರವಾರ ಪ್ರಕರಣವಾಗಿದ್ದು ಕೇಸ್ ವಿಚಾರಣೆ ತನಿಖಾ ಹಂತದಲ್ಲಿದೆ. ಹಲ್ಲೆಯ ಬಳಿಕ ಆರೋಪಿ ಆಸ್ಪತ್ರೆವರೆಗೂ ಹಿಂಬಾಲಿಸಿ ದುವರ್ತನೆ ತೋರಿರುವುದನ್ನು ಗಮನಿಸಲಾಗಿದೆ ಎಂದು ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಇಂದು ಬೆಳಗ್ಗೆ ಜಾಮೀನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದ ಎಂದು ಜೈಲಿನ ಮುಲಗಳಿಂದ ತಿಳಿದುಬಂದಿತ್ತು. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ನಲಪಾಡ್ ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿತ್ತು.