ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಮಗುವನ್ನು ಕಳೆದುಕೊಂಡು ನೋವಿನಲ್ಲಿದ್ದ ರಣಜಿ ಆಟಗಾರ ವಿಷ್ಣು ಸೋಲಂಕಿಗೆ ಮತ್ತೊಂದು ಆಘಾತವಾಗಿದ್ದು, ರಣಜಿ ಆಡುತ್ತಿದ್ದ ವೇಳೆ ತಂದೆಯನ್ನು ಕಳೆದುಕೊಂಡಿದ್ದಾರೆ.
ಸೋಲಂಕಿ ಅವರ ತಂದೆ ಕಳೆದ 2 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಅವರ ಶವವನ್ನು ಹೆಚ್ಚು ಕಾಲ ಶವಗಾರದಲ್ಲಿ ಇಡಲು ಸಾಧ್ಯವಾಗದಿದ್ದರಿಂದ ಅಂತ್ಯಸಂಸ್ಕಾರವನ್ನು ಸೋಲಂಕಿ ಅಣ್ಣ ಮಾಡಿದರು.
Advertisement
Advertisement
ಕಟಕ್‍ನ ವಿಕಾಸ್ ಕ್ರಿಕೆಟ್ ಮೈದಾನದಲ್ಲಿ ಉತ್ತಮ ಫೀಲ್ಡಿಂಗ್ ಪ್ರಯತ್ನದಲ್ಲಿದ್ದರು. ಈ ಸಮಯದಲ್ಲಿ ಸೋಲಂಕಿಗೆ ಬರೋಡಾ ತಂಡದ ಮ್ಯಾನೇಜರ್ ಧಮೇರ್ಂದ್ರ ಅರೋಥೆ ಈ ಬಗ್ಗೆ ಮಾಹಿತಿ ನೀಡಿದರು. ಬರೋಡಾ ನಾಯಕ ಕೇದಾರ್ ದೇವಧರ್ ಮಾತನಾಡಿ, ಸೋಲಂಕಿ ತಂದೆಯ ನಿಧನದ ಬಗ್ಗೆ ಪಂದ್ಯದ ವೇಳೆ ನಮಗೆ ತಿಳಿಯಿತು. ವಿಷ್ಣು ಅವರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಡ್ರೆಸ್ಸಿಂಗ್ ಕೋಣೆಯ ಒಂದು ಮೂಲೆಯಲ್ಲಿ ವೀಡಿಯೋ ಕರೆಯಲ್ಲಿ ನೋಡಿದರು. ಇದು ಅವರಿಗೆ ನಿಜವಾಗಿಯೂ ಕಠಿಣವಾಗಿತ್ತು. ಆದರೆ ಅವರು ತೋರಿಸಿದ ಧೈರ್ಯವು ಗಮನಾರ್ಹವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗನ್ ಹಿಡಿದು ದೇಶ ರಕ್ಷಣೆಗೆ ನಿಂತ ಮಿಸ್ ಉಕ್ರೇನ್
Advertisement
Absolutely heart-breaking this is…
Just days after he lost his newborn, Baroda cricketer Vishnu Solanki lost his father today morning.
Vishnu is in Cuttack playing #Ranji. He told his family he’ll finish the game and come down.
He’s just 29. What all is he going through!!
— KSR (@KShriniwasRao) February 27, 2022
Advertisement
ಕಳೆದ ಕೆಲವೇ ದಿನಗಳ ಹಿಂದಷ್ಟೇ ವಿಷ್ಣು ಸೋಲಂಕಿ ಅವರು ತಮ್ಮ ಹೆಣ್ಣು ಮಗುವನ್ನು ಕಳೆದುಕೊಂಡಿದ್ದರು. ಈ ನೋವಿನಲ್ಲಿಯೇ ಅವರು ಮೈದಾನಕ್ಕೆ ಬಂದಿದ್ದರು. ಆದರೆ ತನ್ನೆಲ್ಲಾ ನೋವನ್ನು ಮರೆತು ಬ್ಯಾಟ್ ಮಾಡಿದ ಅವರು 2ನೇ ದಿನ ಎಲ್ಲರ ಗಮನ ಸೆಳೆದರು. 165 ಎಸೆತಗಳಲ್ಲಿ 103ರನ್ ಗಳಿಸಿದ್ದರು. ಇದನ್ನೂ ಓದಿ: ಮೋದಿ ಜೀ, ಯೋಗಿ ಜೀ ಯಾರಿದ್ದೀರಿ..? ಪ್ಲೀಸ್ ನಮ್ಮನ್ನು ಕಾಪಾಡಿ- ಯುಪಿ ವಿದ್ಯಾರ್ಥಿನಿ ಅಳಲು