ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಮ್‍ನಲ್ಲಿ ಮಧ್ಯರಾತ್ರಿ ಭದ್ರತಾ ಪಡೆ ಎನ್‍ಕೌಂಟರ್ ನಡೆಸಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ಸದೆಬಡಿದಿದೆ.
Advertisement
ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರ ಪೊಲೀಸ್‍ನ ಸ್ಪೆಷಲ್ ಆಪರೇಷನ್ ಗ್ರೂಪ್(ಎಸ್‍ಓಜಿ) ಹಾಗೂ ಸಿಆರ್‍ಪಿಎಫ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ.
Advertisement
ಗುಪ್ತಚರ ಮಾಹಿತಿಯ ಮೇರೆಗೆ ಸೇನಾ ಪಡೆ ಮಂಗಳವಾರ ರಾತ್ರಿ ಈ ಪ್ರದೇಶವನ್ನ ಸುತ್ತುವರಿದಿತ್ತು. ಶೋಧ ಕಾರ್ಯದ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಮಾಡಿದ್ರು. ಕೊನೆಗೆ ಶೋಧ ಕಾರ್ಯ ಎನ್‍ಕೌಂಟರ್ ಆಗಿ ಮಾರ್ಪಟ್ಟಿದ್ದು ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ದಾಳಿ ಸ್ಥಳದಲ್ಲಿ ಭದ್ರತಾ ಪಡೆ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದೆ.
Advertisement
ಸೋಮವಾರದಂದು ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 6 ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
Advertisement
3 terrorists killed in #Budgam identified as Javed Sheikh & Adil of Budgam & Sajjad of Srinagar: Col A Achuthan (2 RR Battalion, Sikh) pic.twitter.com/npP2DtNVcr
— ANI (@ANI) July 12, 2017
Operation lasted entire night, killed and recovered bodies of three terrorists, identity of one terrorist has been ascertained: T Singh, SSP pic.twitter.com/UOC29lZHtc
— ANI (@ANI) July 12, 2017
Identity of 1 more terrorist ascertained, 1 SLR & 1 pistol recovered, yet to search house where terrorists were hiding & set on fire: SSP pic.twitter.com/3YrIz5zv2t
— ANI (@ANI) July 12, 2017