ಬಾಲಿವುಡ್ ನಟ ಬಾಬಿ ಡಿಯೋಲ್‌ಗೆ (Bobby Deol) ಚಿತ್ರರಂಗದಲ್ಲಿ ಅದೃಷ್ಟ ಖುಲಾಯಿಸಿದೆ. ಸಿನಿಮಾ ಆಫರ್ಸ್ ಇಲ್ಲದೇ ತೆರೆಮರೆಯಲ್ಲಿದ್ದ ನಟನಿಗೆ ‘ಅನಿಮಲ್’ (Animal) ಚಿತ್ರದಲ್ಲಿ ಅವಕಾಶ ಸಿಕ್ಕಿದ್ದ ನಂತರ ಅವರಿಗೆ ಬೇಡಿಕೆ ಜಾಸ್ತಿ ಆಗಿದೆ. ಆ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಅನಿಮಲ್ ಸಿನಿಮಾದಲ್ಲಿ ಬಾಬಿ ಡಿಯೋಲ್ ಖಡಕ್ ವಿಲನ್ ಆಗಿ ನಟಿಸಿದ್ದರು. ರಣ್‌ಬೀರ್ ಮತ್ತು ಬಾಬಿ ಜುಗಲ್‌ಬಂದಿ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈಗ ಹಿಂದಿ ಮಾತ್ರವಲ್ಲ ಬೇರೆ ಬೇರೆ ಭಾಷೆಗಳಿಂದ ನಟನಿಗೆ ನಟಿಸಲು ಕರೆ ಬರುತ್ತಿದೆ.
ಸೂರ್ಯ ನಟನೆಯ ‘ಕಂಗುವ’ ಸಿನಿಮಾದಲ್ಲಿ ಬಾಬಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆಶ್ರಮ್ ಸೀಸನ್ 4, ಬಾಲಯ್ಯ ನಟನೆಯ 109ನೇ ಚಿತ್ರದಲ್ಲಿ ಬಾಬಿ ಅಬ್ಬರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ಅಧಿಕೃತ ಮಾಹಿತಿ ನೀಡಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಬಾಬಿ ಡಿಯೋಲ್ ನಟಿಸಲಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಸಿನಿಮಾದ ಭಾಗವಾಗಿದ್ದಾರೆ. ಬಹುಕೋಟಿ ವೆಚ್ಚದ ‘ರಾಮಾಯಣ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀರೋಗಳಿಗಿಂತ ಬಾಬಿ ಡಿಯೋಲ್ ಕಾಲ್‌ಶೀಟ್ ಸಿಗುವುದು ಈಗ ಕಷ್ಟವಾಗಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟ ಮುಂದಿನ ದಿನಗಳಲ್ಲಿ ಯಾವ ಸಿನಿಮಾ ಅವರ ಕೈ ಹಿಡಿಯಲಿದೆ ಎಂಬುದನ್ನು ಕಾಯಬೇಕಿದೆ.