– ವೀಡಿಯೋ ರಿಲೀಸ್ ಹಿಂದೆ ಸರ್ಕಾರದ ಕೈವಾಡ
– ಕುಮಾರಣ್ಣಗೆ ನನಗಿಂತ ರಾಜ್ಯದ ಜನರ ಚಿಂತೆ
ಬೆಂಗಳೂರು: ಆರೋಪ ಬಂದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Pendrive case) ಎಸ್‍ಐಟಿ (SIT) ತನಿಖೆ ಎದುರಿಸುವುದು ಸೂಕ್ತ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಯವರು (Nikhil Kumaraswamy) ಹೇಳಿದ್ದಾರೆ.
Advertisement
ದೇವೇಗೌಡರ (H.D Devegowda) ನಿವಾಸದ ಬಳಿ ಸುದ್ದಿಗಾರರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಘಟನೆ ಆದ ದಿನವೇ ಕುಮಾರಣ್ಣ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದಿದ್ದರು. ಸಂಸದರು ಎಸ್‍ಐಟಿ ತನಿಖೆ ಎದರಿಸುವುದು ಸೂಕ್ತ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. ಇದೇ ವೇಳೆ ಪ್ರಜ್ವಲ್ ಅವರು ನನ್ನೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Advertisement
ಮಾಜಿ ಸಂಸದ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋದಲ್ಲಿ ವಿಚಾರವಾಗಿ, ಶಿವರಾಮೇಗೌಡ ಸರ್ಕಾರದಲ್ಲಿರುವ ಒಬ್ಬ ವ್ಯಕ್ತಿಯ ಹೆಸರು ಉಲ್ಲೇಖಿಸಿದ್ದಾರೆ. ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೋ ಕೇಳಿದ್ದಾರೆ. ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಅವರ ಹೇಳಿಕೆ, ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ರಾಜಕೀಯ ಮಾಡಿ, ಆದರೆ ಇನ್ನೊಬ್ಬರ ಸಾವನ್ನು ಬಯಸಿ ರಾಜಕೀಯ ಮಾಡೋದು ಸರಿಯಲ್ಲ ಎಂದಿದ್ದಾರೆ.
Advertisement
Advertisement
ಹಾಸನದ ಸಂಸದರ ವೀಡಿಯೋ ರಿಲೀಸ್ ಆದ ಬಳಿಕ ಸಂತ್ರಸ್ತೆಯರ ಮುಖವನ್ನ ಬ್ಲರ್ ಮಾಡಲಿಲ್ಲ. ವೀಡಿಯೋ ಬಿಡುಗಡೆ ಮಾಡಿ ಸಂತ್ರಸ್ತೆಯರ ಮಾನ ಹರಾಜು ಮಾಡೋದು ಯಾಕೆ? ವೀಡಿಯೋ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಯಾಕೆ ಆಗ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.\
ದೇವರಾಜೇಗೌಡರಿಗೆ ನೂರು ಕೋಟಿ ಆಫರ್ ವಿಚಾರವಾಗಿ, ದೇವರಾಜೇಗೌಡರಿಗೂ ನನಗೂ ಸಂಪರ್ಕ ಇಲ್ಲ. ಈ ಎಲ್ಲಾ ವಿಚಾರವಾಗಿ ತಾರ್ಕಿಕ ಅಂತ್ಯ ಸಿಗಬೇಕು. ಇದರ ಹಿಂದೆ ರಾಜ್ಯ ಸರ್ಕಾರ ಮತ್ತು ಸರ್ಕಾರದ ಹಿಂದೆ ಇರುವವರ ಇರೋದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕುಮಾರಣ್ಣಗೆ ಮಗನ ಭವಿಷ್ಯದ ಚಿಂತೆ ಅಂತಾರೆ. ನನ್ನ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಕೂರಿಸಬೇಕು ಎನ್ನುವ ಚಿಂತನೆ ಕುಮಾರಣ್ಣರಿಗೆ ಇಲ್ಲ. ಅವರಿಗೆ ರಾಜ್ಯದ ಜನರ ಬಗ್ಗೆ ಚಿಂತೆ ಹಾಗೂ ಬದ್ಧತೆ ಇದೆ. ನಾನು ಸೋತ ಬಳಿಕ ಸಹ ರಾಮನಗರ ಮತ್ತು ಮಂಡ್ಯದಲ್ಲಿ ಓಡಾಡುತ್ತಿದ್ದೇನೆ. ಅನೇಕ ರಾಜಕಾರಣಿಗಳ ಮಕ್ಕಳು ಅಡ್ಜೆಸ್ಟ್ಮೆಂಟ್ ಮೂಲಕ ಉತ್ತಮ ಸ್ಥಾನದಲ್ಲಿದ್ದಾರೆ. ನನಗೆ ಹಾಗೇ ಆಗಿಲ್ಲ, ನಾನು ಒಬ್ಬನೇ ಓಡಾಡುತ್ತಿದ್ದೇನೆ ಎಂದಿದ್ದಾರೆ.