– ಮನೆ ಊಟದ ಮನವಿ ತಿರಸ್ಕರಿಸಿದ ವಿಶೇಷ ಕೋರ್ಟ್
ಬೆಂಗಳೂರು: ಅಂತೂ ಇಂತೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
Advertisement
ಶಶಿಕಲಾ ಜೊತೆ ಆಕೆಯ ಸಂಬಂಧಿ ಇಳವರಸಿ ಕೂಡಾ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಸೇರಿದ ಚಿನ್ನಮ್ಮ ಈಗ ಕೈದಿ ನಂ.9234 ಹಾಗೂ ಇಳವರಸಿ ಕೈದಿ ನಂ. 9235. ಶಶಿಕಲಾ ನೀಡಲಾಗಿದೆ. ಶಶಿಕಲಾ ಸಾಮಾನ್ಯ ಕೈದಿ ವಾರ್ಡ್‍ನಲ್ಲಿ ನಾಲ್ಕು ವರ್ಷಗಳ ಸೆರೆವಾಸ ಅನುಭವಿಸಬೇಕಿದೆ. ಈಗಾಗಲೇ ಇಬ್ಬರು ಮಹಿಳಾ ಕೈದಿಗಳು ಈ ಸೆಲ್‍ನಲ್ಲಿ ಇದ್ದಾರೆ. ಹಾಗೆ ಶಶಿಕಲಾಗೆ 3 ಬಿಳಿ ಸೀರೆ, 2 ತಟ್ಟೆ, ಒಂದು ಚೊಂಬನ್ನು ನೀಡಲಾಗಿದೆ. ಅಲ್ದೆ ಸಾಮಾನ್ಯ ಕೈದಿಗಳು ನೋಡುವ ಟಿವಿಯನ್ನೇ ಶಶಿಕಲಾ ನೋಡಬೇಕು. ಶುಗರ್ ಇದೆ ಎಂದು ಮನೆ ಊಟ ಬೇಕೆಂದು ಕೇಳಿದ್ದ ಶಶಿಕಲಾ ಮನವಿಯನ್ನು ವಿಶೇಷ ಕೋರ್ಟ್ ತಿರಸ್ಕರಿಸಿದೆ. ಇದರ ಜೊತೆ ಶಶಿಕಲಾಗೆ ಕ್ಯಾಂಡಲ್ ತಯಾರಿ ಮಾಡುವ ಕೆಲಸ ನೀಡಲಾಗಿದ್ದು, 50 ರೂಪಾಯಿ ದಿನಗೂಲಿ ಕೂಡ ನೀಡಲಾಗುತ್ತದೆ. ಮತ್ತೋರ್ವ ಅಪರಾಧಿ ಸುಧಾಕರನ್ ಕೂಡ ಪರಪ್ಪನ ಅಗ್ರಹಾರಕ್ಕೆ ಬಂದು ಶರಣಾಗಿದ್ದಾರೆ.
Advertisement
Advertisement
ಇನ್ನು ಶಶಿಕಲಾ ಪರಪ್ಪನ ಅಗ್ರಹಾರ ಕೋರ್ಟ್‍ನತ್ತ ಬರುತ್ತಿದ್ದಂತೆ ಜಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. 30 ವರ್ಷ ಅಮ್ಮನ ಜೊತೆ ಇದ್ದುಕೊಂಡೇ ಮೋಸ ಮಾಡಿದ್ದೀರಿ ಅಂತ ಜಯಾ ಅಭಿಮಾನಿಗಳು ಇನೋವಾ ಕಾರಿನ ಗ್ಲಾಸ್ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಈ ವೇಳೆ 4 ಸ್ಕಾರ್ಪಿಯೋ ಹಾಗೂ 1 ಇನೋವಾ ಕಾರು ಜಖಂ ಆಗಿದೆ.
Advertisement
ಮಧ್ಯಾಹ್ನ 1.30ಕ್ಕೆ ವಿಶೇಷ ಕಾರಿನಲ್ಲಿ ಹೊರಟ ಶಶಿಕಲಾ ಸಂಜೆ 5 ಗಂಟೆ 15 ನಿಮಿಷಕ್ಕೆ ಪರಪ್ಪನ ಅಗ್ರಹಾರ ಜೈಲು ತಲುಪಿದ್ರು. ಜಯಲಲಿತಾ ಬಳಸುತ್ತಿದ್ದ ಟಯೋಟಾ ಪ್ರಾಡೋ ಕಾರಿನಲ್ಲೇ ಶಶಿಕಲಾ ಜೈಲಿಗೆ ಬಂದ್ರು. ತಮಿಳುನಾಡು ಪೊಲೀಸರು ಶಶಿಕಲಾ ನಟರಾಜನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆತಂದು ಪರಪ್ಪನ ಅಗ್ರಹಾರದ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ವಾಪಸ್ ಹೋದ್ರು. ಚೆನ್ನೈ, ವೆಲ್ಲೂರು, ಕೃಷ್ಣಗಿರಿ, ಹೊಸೂರು ಮಾರ್ಗವಾಗಿ ಶಶಿಕಲಾರನ್ನು ಬೆಂಗಳೂರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಯ್ತು. ಮಾರ್ಗದುದ್ದಕ್ಕೂ ಜಯಲಲಿತಾ ಹಾಗೂ ಶಶಿಕಲಾ ಅಭಿಮಾನಿಗಳು ಕಾರಿನತ್ತ ಕೈ ಬೀಸಿದ್ರು. ಶಶಿಕಲಾ ಜೈಲಿಗೆ ಹೋಗೋದನ್ನು ಕಂಡು ಕೆಲವರು ಮರುಗಿದ್ರು. ಕಣ್ಣೀರು ಹಾಕಿ ಚಿನ್ನಮ್ಮನನು ಜೈಲಿಗೆ ಕಳಿಸಬೇಡಿ ಅಂದ್ರು. ಪನ್ನೀರ್ ಸೆಲ್ವಂ ಅಭಿಮಾನಿಗಳು ಖುಷಿ ಪಟ್ರು.
ಇತ್ತ ಶಶಿಕಲಾ ಬರುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಪತಿ ನಟರಾಜನ್ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಬಂದು ನಿಂತಿದ್ರು. ಸಾಕಷ್ಟು ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ರು. ಶಶಿಕಲಾರನ್ನು ಜೈಲಿಗೆ ಹಾಕಬೇಡಿ ಅಂತಾ ಕೆಲವರು ಗಲಾಟೆ ಮಾಡಿದ್ರು.