ಕಲಬುರಗಿ: ಆಳಂದ (Aland) ವೋಟ್ ಚೋರಿ (Vote Theft) ಪ್ರಕರಣ ಸಂಬಂಧ ಎಸ್‌ಐಟಿ (SIT) ತನಿಖೆ ಚುರುಕುಗೊಂಡ ಬೆನ್ನಲ್ಲೇ ಕಲಬುರಗಿಯ (Kalaburagi) ಎರಡು ಕ್ಷೇತ್ರಗಳಲ್ಲಿ ವೋಟ್ ಚೋರಿ ನಡೆದಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ.
ಕಲಬುರಗಿ ಜಿಲ್ಲೆಯ ಆಳಂದದಲ್ಲಿ ವೋಟ್ ಚೋರಿ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆಳಂದ ತಾಲೂಕು ಬಿಟ್ಟು ಕಲಬುರಗಿ ಜಿಲ್ಲೆಯ ಇನ್ನೂ ಎರಡು ಕ್ಷೇತ್ರಗಳಲ್ಲಿ ಕೂಡ ವೋಟ್ ಚೋರಿ ನಡೆದಿದ್ಯಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಎಸ್‌ಐಟಿಗೆ ದಾಖಲೆ ಲಭ್ಯವಾಗಿದೆ. ಹೀಗಾಗಿ ಆ ಎರಡು ಕ್ಷೇತ್ರಗಳಲ್ಲಿ ತನಿಖೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.ಇದನ್ನೂ ಓದಿ: ‘ವೋಟ್ ಚೋರಿ’ ಪ್ರಕರಣ | ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ, ಬಾರ್ ಮೇಲೆ ಎಸ್‌ಐಟಿ ದಾಳಿ
ಕಲಬುರಗಿಯ ಸಿಎ ಮೂಲಕ ಡೇಟಾ ಆಪರೇಟರ್ ಅಕ್ರಂ, ಅಸ್ಲಂ ಎಂಬುವವರಿಗೆ ಹಣ ಸಂದಾಯವಾಗಿತ್ತು. ಬಳಿಕ ಸಿಎ ಮನೆ ಮೇಲೆ ದಾಳಿ ಮಾಡಿ, 2 ಲ್ಯಾಪ್ ಟಾಪ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದೀಗ ಲ್ಯಾಪ್‌ಟಾಪ್ ಸಾಕ್ಷ್ಯಗಳ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಮುಂದಿನ ಕಾರ್ಯಚರಣೆ ನಡೆಸಿದ್ದಾರೆ.

