ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ತಮಿಳಿನ ಬಿಗ್ ಬಾಸ್‌ನಿಂದ ಕಮಲ್ ಹಾಸನ್ (Kamal Haasan) ಹೊರಬಂದ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಿಕ್ಕಿದೆ. ಇದೀಗ ಕಮಲ್ ಹಾಸನ್ ಜಾಗಕ್ಕೆ ವಿಜಯ್ ಸೇತುಪತಿ (Vijay Sethupathi) ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಎಂಟ್ರಿ
ಕಮಲ್ ಹಾಸನ್ ನಂತರ ಬಿಗ್ ಬಾಸ್ (Bigg Boss Tamil 8) ನಿರೂಪಣೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂದು ಕುತೂಹಲ ಮೂಡಿತ್ತು. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ಕೈತುಂಬಾ ಸಿನಿಮಾಗಳ ನಡುವೆ ವಿಜಯ್ ಸೇತುಪತಿ ಈಗ ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ಬಿಗ್ ಬಾಸ್ ಟೀಮ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಅಂದಹಾಗೆ, 7 ವರ್ಷಗಳ ಹಿಂದೆ ಶುರುವಾದ ನನ್ನ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
`ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ನಿಮ್ಮ ಮನ ಮತ್ತು ಮನೆ ತಲುಪಿದ್ದೇನೆ. ಅಗಾಧ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಕಲಿಕೆಯ ಅನುಭವ ನೀಡಿದ ಈ ಶೋಗೆ ನಾನು ಋಣಿಯಾಗಿದ್ದೇನೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಕಮಲ್ ಹಾಸನ್ ಹೇಳಿದ್ದರು.