ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುಪ್ರಿಯ ಕೇಸ್ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಅಪಘಾತ ನಡೆದು ಒಂದೂವರೆ ತಿಂಗಳ ಬಳಿಕ ಗೀತಾ ವಿಷ್ಣು ಘಟನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ನಾನು ಡ್ರಗ್ ಸೇವಿಸೋದಿಲ್ಲ. ನನ್ನ ಕಾರಿನಲ್ಲಿ ಗಾಂಜಾ ಹೇಗೆ ಬಂತು ಅಂತಾ ಗೊತ್ತಿಲ್ಲ. ಅಷ್ಟೇ ಅಲ್ಲದೇ ಅಪಘಾತ ನಡೆದಾಗ ನನ್ನ ಜೊತೆ ನಟರಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಇರಲಿಲ್ಲ. ಸ್ನೇಹಿತನ ಕಾರು ಆಕ್ಸಿಡೆಂಟ್ ಆಗಿದೆಯಲ್ಲಾ ಅಂತಾ ಪ್ರಣವ್ ದೇವರಾಜ್ ಸ್ಥಳಕ್ಕೆ ಬಂದಿದ್ದು ನಿಜ ಅಂತಾ ಅವರು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಅಷ್ಟಕ್ಕೂ ನಾನು ಅವತ್ತು ಕಾರನ್ನು ಚಾಲಯಿಸುತ್ತಿರಲಿಲ್ಲ. ನನ್ನ ಡ್ರೈವರ್ ಕಾರನ್ನು ಓಡಿಸುತ್ತಿದ್ದ. ಸ್ಥಳದಲ್ಲಿ ಜಮಾಯಿಸಿದ ಕೆಲವು ಜನರು ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಕಾರಿಗೆ ಬೆಂಕಿ ಹಚ್ಚಿದ್ದರು. ಇನ್ನು ಮಲ್ಯ ಆಸ್ಪತ್ರೆಯ ಐಸಿಯುನಿಂದ ನಾನು ಓಡಿಹೋಗಿಲ್ಲ. ನನ್ನ ಪಕ್ಕದ ಬೆಡ್‍ನ ವ್ಯಕ್ತಿ ಸತ್ತು ಹೋಗಿದ್ದರು. ಆದ್ದರಿಂದ ನಾನು ಸಹಜವಾಗಿ ಭಯಗೊಂಡು ಆಸ್ಪತ್ರೆಯಿಂದ ಹೊರಬಂದೆ. ನನ್ನ ಮತ್ತು ಕುಟುಂಬದ ಮೇಲೆ ಇಲ್ಲಸಲ್ಲದ ವರದಿಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ.
Advertisement
ಈ ಘಟನೆಯಿಂದ ನನಗೆ ನನ್ನ ಕುಟುಂಬಕ್ಕೆ ಡ್ಯಾಮೇಜ್ ಆಗಿರೋದು ಸತ್ಯವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ನ್ಯಾಯಾಲಯದಲ್ಲಿ ನಾನು ಗೆದ್ದು ಬರುವ ವಿಶ್ವಾಸವಿದೆ ಅಂತಾ ಗೀತಾ ವಿಷ್ಣು ಹೇಳಿದ್ದಾರೆ.
Advertisement
ಅಪಘಾತ ನಡೆದಿದ್ದು ಹೇಗೆ?: ಗೀತಾವಿಷ್ಣು ಅವರು ಜಯನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಘಟನೆ ನಡೆದ ದಿನ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದರು. ಹಾಗೆ ತೆರಳುವ ಹೊತ್ತಲ್ಲಿ ಅವರು ಹೋಗುವ ದಾರಿಯಲ್ಲಿ ಗ್ರೀನ್ ಸಿಗ್ನಲ್ ಇದ್ದುದರಿಂದ ಚಾಲಕರು ವಾಹನವನ್ನು ಮುನ್ನಡೆಸುತ್ತಿದ್ದರು. ಅದೇ ಹೊತ್ತಿಗೆ ಪಕ್ಕದ ರಸ್ತೆಯಿಂದ ರೆಡ್ ಸಿಗ್ನಲ್ ಇದ್ದಾಗಲ್ಲೂ ಮಾರುತಿ ಓಮ್ನಿ ವಾಹನ ವೇಗವಾಗಿ ಬಂದಿದ್ದರಿಂದ ಅಪಘಾತವನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ಹಾಗಿದ್ದರೂ ಅದು ಓಮ್ನಿಗೆ ಡಿಕ್ಕಿ ಹೊಡೆದಿದೆ. ನಂತರ ವಾಹನ ಫುಟ್ ಪಾತ್ ಮೇಲೆ ಏರಿ ಎರಡು ಕಂಬಗಳ ನಡುವೆ ನಿಂತಿದೆ.
ಅಪಘಾತದ ತೀವ್ರತೆ ತಪ್ಪಿಸುವ ಸಲುವಾಗಿ ಎಚ್ಚರಿಕೆಯಿಂದಲೂ ಚಾಕಚಕ್ಯತೆಯಿಂದಲೂ ವಾಹನ ಓಡಿಸುವ ಮೂಲಕ ಚಾಲಕನಿಗೆ ಆಗಬಹುದಾಗಿದ್ದ ಹಾನಿಯನ್ನು ತಪ್ಪಿಸಿದ್ದಾರೆ. ಅಪಘಾತದ ಸದ್ದು ಕೇಳುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಗಳಲ್ಲಿದ್ದ ಮೊಹಮ್ಮಡನ್ ಬ್ಲಾಕ್ ಮಂದಿ ಬಂದು ಗೀತಾವಿಷ್ಣು ಅವರಿಗೆ ಮಾತಾಡಲಿಕ್ಕೂ ಅವಕಾಶ ಕೊಡದೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಗೀತಾವಿಷ್ಣು ತಪ್ಪಿಲ್ಲವೆಂದು ಹೇಳಿ ಅವರ ಪರವಾಗಿ ನಿಂತಿದ್ದಾರೆ ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿ ಅವರನ್ನು ಒಳಗೆ ಕೂರಿಸಿ ಉಪಚರಿಸಿದ್ದಾರೆ. ಸರಿಯಾದ ಸಮಯಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆ ನಡೆಯುವ ಮೊದಲು ಬಂದೋಬಸ್ತ್ ಮಾಡಿ ಎರಡೂ ಕಡೆಯ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.
https://www.youtube.com/watch?v=-qMErQzjP_U