ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

Public TV
1 Min Read
train

ಲಖ್ನೋ: ಒಂದೇ ಒಂದು ಟ್ವೀಟ್‍ನಿಂದಾಗಿ 26 ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ) ಮತ್ತು ರೈಲ್ವೆ ರಕ್ಷಣಾ ದಳ (ಆರ್​ಪಿಎಫ್) ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜುಲೈ 5ರಂದು 26 ಬಾಲಕಿಯರನ್ನು ಮುಜಾಫರ್ ಪುರ-ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಬಾಲಕಿಯರು ಅಳುತ್ತಿರವುದನ್ನು ಕೇಳಿಸಿಕೊಂಡಿದ್ದ ಪ್ರಯಾಣಿಕರೊಬ್ಬರು ಅಪಹರಣ ಶಂಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ರೈಲ್ವೆ ಅಧಿಕಾರಿಗಳು, ಕಳ್ಳ ಸಾಗಾಣಿಕೆ ಪತ್ತೆ ಘಟಕಕ್ಕೆ ಬಾಲಕಿಯರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ತಕ್ಷಣವೇ ಜಾಗೃತರಾದ ಇಬ್ಬರು ಪೊಲೀಸರು ಕಪತ್ ಗಂಜ್‍ನಿಂದ ಗೋರಖಪುರವರೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

ಗೋರಕ್‍ಪುರಗೆ ರೈಲು ಬರುತ್ತಿದ್ದಂತೆ ಜಿಆರ್​ಪಿ ಮತ್ತು ಆರ್​ಪಿಎಫ್ ಪೊಲೀಸರು ಬಾಲಕಿಯರನ್ನು ರಕ್ಷಣೆ ಮಾಡಿದ್ದು, ಅವರನ್ನು ಕರೆದೊಯ್ಯುತ್ತಿದ್ದ 22 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡಿದಿದ್ದಾರೆ.

ಬಾಲಕಿಯರು 10 ರಿಂದ 14 ವರ್ಷದವರಾಗಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ಪ್ರದೇಶದವರು. ಅವರನ್ನು ನರಕ್ತಿಯಾಗಂಜ್ ನಿಂದ ಇದ್ಗಾಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಕುರಿತು ಸದ್ಯ ಬಾಲಕಿರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *