ನವದೆಹಲಿ: ಈ ವರ್ಷ ಆಗಸ್ಟ್ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಭಾರಿ ಮಳೆಯಾಗಿದೆ. ನಗರದಲ್ಲಿ ಈವರೆಗೂ 269.9 ಮಿಮೀ. ಮಳೆ ದಾಖಲಾಗಿದೆ. ಇದು ಕಳೆದ ಒಂದು ದಶಕದಲ್ಲೇ ಅತ್ಯಧಿಕ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ (Indian Meteorological Department) ಅಂಕಿ ಅಂಶಗಳು ತಿಳಿಸಿವೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇಲ್ಲಿಯವರೆಗೆ 269.9 ಮಿಮೀ. ಮಳೆಯಾಗಿದೆ, ಇದು ಆಗಸ್ಟ್ 2013 ರಲ್ಲಿ ದಾಖಲಾದ ಗರಿಷ್ಠವನ್ನು ಪ್ರಮಾಣವನ್ನು ಮೀರಿಸಿದೆ. ಇದರಿಂದಾಗಿ ದೆಹಲಿಯಲ್ಲಿ ನಿರೀಕ್ಷೆ ಮೀರಿದ ದಿನಗಳಿಂದ ಮಳೆಯು ಸುರಿಯುತ್ತಿದೆ.
Advertisement
Advertisement
2.4 ಮಿ.ಮೀಗಿಂತ ಜಾಸ್ತಿ ಮಳೆಯಾದರೆ ಸಾಧಾರಣವಾಗಿ ಜಾಸ್ತಿ ಮಳೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಆ.11 ರಿಂದ ಆಗಸ್ಟ್ 22 ರವರೆಗೆ ಭಾರೀ ಮಳೆಯಾಗಿದೆ ಎಂದು ತಿಳಿಸಿದೆ. ಇದು ಈ ವರ್ಷದ ಮಾನ್ಸೂನ್‌ನ ಅಸಾಮಾನ್ಯ ತೀವ್ರತೆಯನ್ನು ಸೂಚಿಸುತ್ತದೆ. ಭಾರತೀಯ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ 2012 ಮತ್ತು 2013ರ ಆಗಸ್ಟ್ನಲ್ಲಿ ಕ್ರಮವಾಗಿ 378 ಮಿಮೀ. ಹಾಗೂ 321 ಮಿಮೀ ಮಳೆ ದಾಖಲಾಗಿತ್ತು.
Advertisement
ಶುಕ್ರವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಡಿಗ್ರಿ ಸೆಲ್ಸಿಯಸ್ ಮತ್ತು 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಂಡಿದೆ. ಹವಾಮಾನ ಇಲಾಖೆ ತಜ್ಞರು ಮುಂದಿನ ಏಳು ದಿನಗಳವರೆಗೆ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ (Weather Forecast) ನೀಡಿದ್ದಾರೆ.