ಅಲ್ಬನಿ: ಪತಿ ಜೊತೆ ನ್ಯೂಯಾರ್ಕ್‍ನಲ್ಲಿದ್ದ ಭಾರತೀಯ ಮೂಲದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
ನ್ಯೂಯಾರ್ಕ್ ನಿವಾಸಿಯಾಗಿರುವ 30 ವರ್ಷದ ಭಾರತೀಯ ಮೂಲದ ಮಹಿಳೆ ಮಂದೀಪ್ ಕೌರ್ ಅವರು ಎಂಟು ವರ್ಷಗಳ ಕಾಲ ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಅವರಿಂದ ಪದೇ ಪದೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಪರಿಣಾಮ ಪತಿಯ ಕಿರಿಕುಳ ತಡೆಯಲಾದೆ ಆಗಸ್ಟ್ 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌರ್ ಅವರಿಗೆ ನಾಲ್ಕು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: 3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ
Advertisement
Advertisement
ಪ್ರಸ್ತುತ ಪೊಲೀಸರು ಸಂಧು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಪುತ್ರಿಯರು ನ್ಯೂಯಾರ್ಕ್‍ನ ರಿಚ್ಮಂಡ್ ಹಿಲ್‍ನಲ್ಲಿದ್ದಾರೆ. ಅವರ ಕುಟುಂಬ ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
@TheKaurMovement ಎಂಬ ಇನ್‍ಸ್ಟಾ ಪೇಜ್ ಕ್ರಿಯೇಟ್ ಮಾಡಿ ಪ್ರತಿಭಟನೆಕಾರರು ಜಸ್ಟಿಸ್‍ಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಪೇಜ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕೌರ್ ತನ್ನ ವೈವಾಹಿಕ ಜೀವನದುದ್ದಕ್ಕೂ ಹಿಂಸೆ ಮತ್ತು ನಿಂದನೆಯನ್ನು ಅನುಭವಿಸಿದ್ದಾಳೆ. ತನ್ನ ಮೂಗೇಟುಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತೋರಿಸುತ್ತಾ, ತನ್ನ ಅತ್ತೆ ಹೇಗೆ ನಿಂದನೆಯನ್ನು ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ವಿವರಿಸಿದ್ದಾಳೆ.
Advertisement
View this post on Instagram
ವೀಡಿಯೋದಲ್ಲಿ ಏನಿದೆ?
ನನಗೆ ನಿಜವಾಗಿಯೂ ತುಂಬಾ ದುಃಖವಾಗಿದೆ. ನಾನು ಮದುವೆಯಾಗಿ ಎಂಟು ವರ್ಷಗಳಾಯಿತು. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನಾನು ಪ್ರತಿದಿನ ಅವನ ಹೊಡೆತಗಳನ್ನು ಅನುಭವಿಸುತ್ತಿದ್ದೇನೆ. ಅವನು ಒಂದು ದಿನ ಸುಧಾರಿಸುತ್ತಾನೆ ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲ, ಅವನು ಎಂದೂ ಸುಧಾರಿಸುವುದಿಲ್ಲ. ಅಲ್ಲದೇ ಅವನು ಅಕ್ರಮ ಸಂಬಂಧವನ್ನು ಹೊಂದಿದ್ದಾನೆ. ನಾವು ಮೊದಲ ಎರಡೂವರೆ ವರ್ಷ ಭಾರತದಲ್ಲಿ ವಾಸಿಸುತ್ತಿದ್ದೆವು. ಅದು ನರಕವಾಗಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ
ನನ್ನ ತಂದೆ ಪೊಲೀಸ್ ಕೇಸ್ ದಾಖಲಿಸಿದ್ದರು. ನಂತರ ಅವನು ನನ್ನನ್ನು ಉಳಿಸಿ, ನನ್ನನ್ನು ಉಳಿಸಿ ಎಂದು ಬೇಡಿಕೊಳ್ಳಲು ಪ್ರಾರಂಭಿಸಿದ. ನಾನು ಅವನನ್ನು ಉಳಿಸಿದೆ. ನಾನು ಎಲ್ಲವನ್ನೂ ಸರಿಮಾಡಲು ಪ್ರಯತ್ನಿಸಿದೆ, ಆದರೆ ನನ್ನ ಅತ್ತೆ ನನಗೆ ಏನು ಸಹಾಯ ಮಾಡಲಿಲ್ಲ. ಆದರೆ ಇದಕ್ಕೆಲ್ಲ ದೇವರು ಉತ್ತರ ತೋರಿಸುತ್ತಾನೆ. ನಾನು ಏನನ್ನೂ ಹೇಳುವುದಿಲ್ಲ. ದೇವರು ಎಲ್ಲರನ್ನು ಶಿಕ್ಷಿಸುತ್ತಾನೆ. ಆದರೆ ಈಗ ನಾನು ಅಸಹಾಯಕಿಯಾಗಿದ್ದೇನೆ. ನಾನು ನನ್ನ ಮಕ್ಕಳನ್ನು ಬಿಟ್ಟು ಈಗ ಹೋಗಬೇಕಾಗಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.