ಬೆಂಗಳೂರು: ಬಸ್ ದರ ಏರಿಕೆ ಬೆನ್ನಲ್ಲೇ ನಮ್ಮ ಮೆಟ್ರೋ (Namma Metro) ದರವೂ ಏರಿಕೆಯಾಗಲಿದೆ. ಇಂದು ನಡೆದ ಸಭೆಯಲ್ಲಿ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (BMRCL) ದರ ಏರಿಕೆಗೆ ಅಸ್ತು ಎಂದಿದೆ.
ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಈ ಸಂಬಂಧ ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಹೈವೊಲ್ಟೇಜ್ ಸಭೆ ಇಂದು ನಡೆಯಿತು. ಸಭೆಯಲ್ಲಿ ದರ ಏರಿಕೆ, ಜೊತೆಗೆ ಪರಿಷ್ಕೃತ ದರ ನಿಗದಿ ದಿನಾಂಕ ಕೂಡ ಫೈನಲ್ ಮಾಡಲಾಗಿದೆ. ಶನಿವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಬಿಎಂಆರ್‌ಸಿಎಲ್ ದರ ಏರಿಕೆ ವಿವರವನ್ನು ಪ್ರಕಟಿಸಲಿದೆ.
Advertisement
ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: BMTC Ticket Price Hike| ಮೆಜೆಸ್ಟಿಕ್‌ನಿಂದ ನಿಮ್ಮ ಏರಿಯಾಗೆ ಎಷ್ಟು ರೂ.? ಇಲ್ಲಿದೆ ಕಂಪ್ಲೀಟ್ ಲಿಸ್ಟ್
Advertisement
Advertisement
2017 ರಲ್ಲಿ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆಯಾಗಲಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15%-20% ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
Advertisement
ಪ್ರಸ್ತುತ, ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ ಈ 10, ಗರಿಷ್ಠ ದರ 60 ರೂಪಾಯಿವರೆಗೆ ಇದೆ. ಜತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಹ ತನ್ನ ವರದಿ ನೀಡಿದೆ. ದರ ಎಷ್ಟು ಹೆಚ್ಚಿಸಬೇಕು, ಸಾಧಕ, ಬಾಧಕಗಳೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಸಮಿತಿ ನೀಡಿರುವ ವರದಿಯಲ್ಲಿ ಏನಿದೆ?
– ಮೆಟ್ರೋ ಟಿಕೆಟ್ ದರವನ್ನ 40 ರಿಂದ 45% ವರೆಗೆ ಏರಿಕೆ ಮಾಡಬಹುದು.
– ರಜೆ ದಿನ ಹಾಗೂ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣ ದರ ಇಳಿಕೆ ಮಾಡಿದರೆ ಉತ್ತಮ.
– ಸಾರ್ವಜನಿಕರ ರಜಾ ದಿನಗಳಲ್ಲಿ ರಿಯಾಯಿತಿ ನೀಡಬೇಕು.
– ನಾನ್ ಪೀಕ್ ಅವರ್‌ಗಳಲ್ಲಿ ಡಿಸ್ಕೌಂಟ್ ನೀಡಬೇಕು.
– ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ನೀಡಲು ಸೂಚನೆ.
– ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಹಾಗೂ ಮಧ್ಯಾಹ್ನದಿಂದ ಸಂಜೆ 4 ಗಂಟೆಯವರಿಗೆ ಡಿಸ್ಕೌಂಟ್‌ಗೆ ಶಿಫಾರಸು
– ಪ್ರಯಾಣಿರನ್ನು ಸೆಳೆಯಲು ರಿಯಾಯಿತಿ ಪ್ರಯಾಣಕ್ಕೆ ಪ್ಲಾನ್