ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 8 ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ ಎಂದು ಸುದ್ದಿಯಾದ ಮಹಿಳೆ ಈಗ ತನ್ನ ಮತ್ತೊಬ್ಬ ಪತಿ ಹಾಗೂ 6 ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾಳೆ.
ಆಸ್ಮಾ ಬೀಬಿ (30) 8 ವರ್ಷಗಳ ನಂತರ ಕಾಣಿಸಿಕೊಂಡಿದ್ದಾಳೆ. 8 ವರ್ಷಗಳ ಹಿಂದೆ ಆಸ್ಮಾಳನ್ನು ಆಕೆಯ ಪತಿ ಕೊಂದಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಆದರೆ ಈಗ ಆಸ್ಮಾ ಜೇಲಮ್ ಜಿಲ್ಲೆಯಲ್ಲಿರುವ ಫಾಲಾಯನಾ ಗ್ರಾಮದಲ್ಲಿ ಬೇರೊಬ್ಬ ಪತಿ ಹಾಗೂ ತನ್ನ 6 ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾಳೆ.
Advertisement
ಲಾಹೋರ್‍ಗೆ 250 ಕಿ.ಮೀ ದೂರದಲ್ಲಿರುವ ಊರಿನಲ್ಲಿ ಕಾಣಿಸಿಕೊಂಡ ಆಸ್ಮಾ ಆ ಗ್ರಾಮದಲ್ಲಿ ತನ್ನ ಹೆಸರು ನೀಲಂ ಎಂದು ಹೇಳಿಕೊಂಡಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Advertisement
8 ವರ್ಷಗಳ ನಂತರ ಆಕೆಯ ಮೊದಲ ಪತಿಯ ಮನೆಯವರು ಆಸ್ಮಾಳ ಗುರುತನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಜೇಲಮ್ ಪೊಲೀಸರ ಪ್ರಕಾರ ಆಸ್ಮಾ 2009ರಲ್ಲಿ ಇಬ್‍ರಾರ್ ಎಂಬವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಳು. ನಂತರ 2010ರಲ್ಲಿ ಆಸ್ಮಾ ಕಾಣೆಯಾಗಿದ್ದಳು. ಆಸ್ಮಾಳನ್ನು ಆಕೆಯ ಪತಿ ಇಬ್‍ರಾರ್ ಕೊಲೆ ಮಾಡಿದ್ದಾನೆಂದು ಆಸ್ಮಾ ತಾಯಿ ಆರೋಪಿಸಿದ್ದರು.
Advertisement
ಆಸ್ಮಾ ಅವರ ತಾಯಿಯ ಆರೋಪ ಮಾಡಿದ್ದರಿಂದ ಪೊಲೀಸರು ಇಬ್‍ರಾರ್ ನನ್ನು ಬಂಧಿಸಿದ್ದರು. ನಂತರ ಆಸ್ಮಾ ತಾಯಿಗೆ ಪರಿಹಾರ ಸಿಕ್ಕಿದ ಮೇಲೆ ಆಕೆ ಕೇಸನ್ನು ಹಿಂಪಡೆದ್ದರು. ನಾನು ಅಹಮದ್‍ನನ್ನು ಪ್ರೀತಿಸುತ್ತಿದೆ. ಆತನ ಜೊತೆ ಮದುವೆಯಾಗಿ ದುಬೈಗೆ ಹೋಗಿದ್ದೆ. ನನ್ನ ಕುಟುಂಬದವರು ನನ್ನ ಪ್ರೀತಿಯನ್ನು ಒಪ್ಪಲಿಲ್ಲ. ಅವರು ಬಲವಂತವಾಗಿ ನನ್ನ ಮದುವೆಯನ್ನು ಇಬ್‍ರಾರ್ ಜೊತೆ ಮಾಡಿಸಿದ್ದರು. ಅಹಮ್ಮದ್ ಜೊತೆ ನಾನು ಎರಡನೇ ಮದುವೆಯಾಗಿದ್ದು, ನನಗೆ ಯಾವುದೇ ದುಃಖವಿಲ್ಲ ಎಂದು ಆಸ್ಮಾ ಪೊಲೀಸರಿಗೆ ತಿಳಿಸಿದ್ದಾಳೆ.
Advertisement
ಈ ಪ್ರಕರಣ ಸಂಬಂಧ ಜೇಲಮ್‍ನ ಸಿವಿಲ್ ಜಡ್ಜ್ ಸೋಬಿಯಾಗೆ 50 ಸಾವಿರ ರೂ. ಶ್ಯೂರಿಟಿ ಇಡಬೇಕೆಂದು ಸೂಚಿಸಿ ಜಾಮೀನು ಮಂಜೂರು ಮಾಡಿದ್ದಾರೆ.