ಫೇಸ್‍ಬುಕ್‍ನಲ್ಲಿ ಅರಳಿದ ಪ್ರೀತಿಗೆ ಮದ್ವೆ ಬಂಧನ – 6 ತಿಂಗ್ಳಿಗೇ ಮುರಿದು ಬಿತ್ತು ಸುಂದರ ಸಂಸಾರ

Public TV
1 Min Read
MYS FB LOVE

ಮೈಸೂರು: ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಫೇಸ್ ಬುಕ್ ನಲ್ಲಿ ಹುಟ್ಟಿಕೊಂಡ ಪ್ರೇಮ ಮದುವೆಯಾದ ಆರೇ ತಿಂಗಳಿಗೆ ಅಂತ್ಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಜಯಪುರದ ನಿವಾಸಿ ಫೈಸಲ್ ಅಹಮದ್‍ಗೆ ಫೇಸ್ ಬುಕ್ ಮೂಲಕ ಗುಜರಾತ್ ನ ದ್ವಾರಕಾ ಜಿಲ್ಲೆಯ ದೇವಭೂಮಿಯ ನ್ಯಾನ್ಸಿ ಜೋಷಿ ಪರಿಚಯವಾಗಿತ್ತು. ಈ ಪರಿಚಯವೂ ಪ್ರೀತಿಗೆ ತಿರುಗಿದ್ದು, ನಂತರ ಯುವತಿ ಗುಜರಾತ್ ನಿಂದ ಮೈಸೂರಿಗೆ ಬಂದು ಫೈಸಲ್ ನನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಆರೇ ತಿಂಗಳಲ್ಲಿ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪರಸ್ಪರ ದೂರವಾಗಿದ್ದಾರೆ.

MYS FB LOVE 1 1

ಫೈಸಲ್ ಮತ್ತು ಜೋಷಿ ಮೂರು ವರ್ಷಗಳ ಹಿಂದೆ ಫೇಸ್‍ಬುಕ್‍ನಲ್ಲಿ ಪರಿಚಯ ಆಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿಯಾಗಿದ್ದು, ಯುವತಿಯ ಮನೆಯವರು ಪ್ರೀತಿಗೆ ನಿರಾಕರಿಸಿದ್ದರಿಂದ ಆರು ತಿಂಗಳ ಹಿಂದೆ ಮನೆಯಿಂದ ಒಬ್ಬರೆ ಓಡಿ ಬಂದಿದ್ದಾರೆ. ಬಳಿಕ ಫೈಸಲ್ ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ನಂತರ ಮೈಸೂರಿನಲ್ಲೇ ಮದುವೆ ಮಾಡಿಕೊಂಡಿದ್ದನು.

ಮದವೆಯಾದ ನಂತರ ಗಂಡ ಮತ್ತು ಅತ್ತೆಯಿಂದ ಮುಸ್ಲಿಂ ಧರ್ಮ ಪಾಲನೆ ಮಾಡುವಂತೆ ಒತ್ತಾಯಿಸುತ್ತಿದ್ದು, ಕುರಾನ್ ಓದುವಂತೆ, ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದರು ಎಂದು ಯುವತಿ ಆರೋಪಿಸುತ್ತಿದ್ದಾರೆ. ಕೊನೆಗೆ ಪತಿ ಮತ್ತು ಅತ್ತೆ ಕಾಟಕ್ಕೆ ಬೇಸತ್ತು ತನ್ನ ತಂದೆ ಮನೆಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಬಳಿಕ ಯುವತಿಯ ಸಹೋದರ ಮೈಸೂರಿಗೆ ಬಂದು ತಂಗಿಯನ್ನ ರಕ್ಷಣೆ ಮಾಡಿದ್ದಾರೆ.

ಸಹೋದರ ತಂಗಿಯನ್ನು ಕರೆದುಕೊಂಡು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾರೆ. ಅಲ್ಲಿ ಯುವತಿ ತಾನು ತನ್ನ ತಂದೆ ಮನೆಗೆ ಮರಳುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ನಂತರ ಪೊಲೀಸರು ತಡರಾತ್ರಿ ಯುವತಿಯನ್ನು ಗುಜರಾತ್ ರಾಜ್ಯಕ್ಕೆ ವಾಪಸಾಗಲು ಸಹಾಯ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಯುವತಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

MYS FB LOVE 2

17 facebook anon

Love Marriage

marriage

marriage 1

Marriage 3

Marriage 11

Marriage 2

Share This Article
Leave a Comment

Leave a Reply

Your email address will not be published. Required fields are marked *