ಬೆಂಗಳೂರು: ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿವೆ. ಈಗಾಗಲೇ 21 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗ್ತಿದೆ.
ಮೈತ್ರಿ ಸರ್ಕಾರದಲ್ಲಿ ಸಂಪುಟ ರಚನೆಯ ಬಿಕ್ಕಟ್ಟು ಮಾತ್ರ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರುಗಳನ್ನು ಬಿಜೆಪಿ ಟಾರ್ಗೆಟ್ ಮಾಡಲು ನಿರ್ಧರಿಸಿದೆ. ಯಾರು ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಬಗ್ಗೆ ಮಾತನಾಡೋದು ಬೇಡ. ನಮ್ಮದೇನಿದ್ರು ಜೆಡಿಎಸ್ ನ ಅಪ್ಪ-ಮಕ್ಕಳು (ಹೆಚ್.ಡಿ.ದೇವೇಗೌಡ-ಹೆಚ್.ಡಿ.ಕುಮಾರಸ್ವಾಮಿ) ಟಾರ್ಗೆಟ್ ಮಾಡಿ ಅಂತಾ ತಮ್ಮ ಎಲ್ಲ ಮುಖಂಡರಿಗೆ ಬಿಜೆಪಿ ಸೂಚಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ನಮ್ಮ ಆಟ ಮುಗಿದಿಲ್ಲ. ಇನ್ನೂ ಬಾಕಿ ಇದೆ. ಸಂಪುಟ ವಿಸ್ತರಣೆ ಆಗವರೆಗೂ ಕಾದು ನೋಡೋಣ. ಆರು ತಿಂಗಳು ಮಾತ್ರ ತಾಳ್ಮೆಯಿಂದಿರಿ. ನಂತರದ ದಿನಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹಾಗಾಗಿ ನಾವು ಸದ್ಯಕ್ಕೆ ಕಾಂಗ್ರೆಸ್‍ನವರ ಬಗ್ಗೆ ಹೋರಾಟ ಮಾಡೋದು ಬೇಡ ಎಂಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾದ ಸೂಚನೆಯನ್ನು ರಾಜ್ಯ ನಾಯಕರಿಗೆ ರವಾನಿಸಲಾಗಿದೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ.