ಜಾರ್ಜ್‌ಟೌನ್: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ (PM Narendra Modi) ಇಂದು (ನ.20) ಗಯಾನಾಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ 56 ವರ್ಷಗಳಲ್ಲಿ ಮೊದಲ ಭಾರತೀಯ ಪ್ರಧಾನಿಯಾಗಿ ಭೇಟಿ ನೀಡಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗಯಾನಾಗೆ (Guyana) ಆಗಮಿಸಿದ್ದು, 56 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ದಕ್ಷಿಣ ಅಮೆರಿಕಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.ಇದನ್ನೂ ಓದಿ: ವೈಭವದಿಂದ ನಡೆಯಿತು ಶ್ರೀ ಅಭಯ ಆಂಜನೇಯ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ
ಜಾರ್ಜ್‌ಟೌನ್‌ಗೆ (Georgetown) ಬಂದಿಳಿದ ಮೋದಿಯವರನ್ನು ಸ್ವಾಗತಿಸಲು ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ (Mohamed Irfaan Ali) ಮತ್ತು ಹನ್ನೆರಡು ಕ್ಯಾಬಿನೆಟ್ ಮಂತ್ರಿಗಳು ಆತ್ಮೀಯತೆಯಿಂದ ಬರಮಾಡಿಕೊಂಡರು.
Landed in Guyana a short while ago. Gratitude to President Dr. Irfaan Ali, PM Mark Anthony Phillips, senior ministers and other dignitaries for coming to receive me at the airport. I am confident this visit will deepen the friendship between our nations. @presidentaligy… pic.twitter.com/B5hN0R96ld
— Narendra Modi (@narendramodi) November 20, 2024
ಪ್ರಧಾನಿ ಮೋದಿಯವರು ಇಂದು ಅಧ್ಯಕ್ಷ ಮೊಹಮದ್ ಇರ್ಫಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದು, ದಕ್ಷಿಣ ಅಮೆರಿಕಾದ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
A heartfelt thank you to the Indian community in Guyana for their warm and spirited welcome.
They have shown that distance is never a barrier to staying connected to one’s roots. Glad to see the community making a mark here across different sectors. pic.twitter.com/BED9nxnEuZ
— Narendra Modi (@narendramodi) November 20, 2024
ಕೆರಿಬಿಯನ್ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಕೈಗೊಂಡ ಈ ಭೇಟಿಯು ಭಾರತ ಮತ್ತು ಗಯಾನಾ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.
ಪ್ರಧಾನಿ ಮೋದಿಯವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಅನ್ನು ನೀಡಲಿದೆ. ಜೊತೆಗೆ ಬಾರ್ಬಡೋಸ್ ತನ್ನ ಪ್ರತಿಷ್ಠಿತ `ಆರ್ಡರ್ ಆಫ್ ಫ್ರೀಡಮ್ ಆಫ್ ಬಾರ್ಬಡೋಸ್’ ಅನ್ನು ನೀಡಲಿದೆ. ಈ ಮೂಲಕ ಪ್ರಧಾನಿ ಮೋದಿ ಒಟ್ಟು 19 ಅಂತರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿದಂತಾಗುತ್ತದೆ.ಇದನ್ನೂ ಓದಿ: ವಿಕ್ರಂ ಗೌಡ ಎನ್‌ಕೌಂಟರ್| ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ: ಪರಮೇಶ್ವರ್