ಬೆಂಗಳೂರು: ಕೆಂಗೇರಿ (Kengeri) ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಐದು ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಹೌದು, ವೃದ್ದೆ ಶಾಂತಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ (Kollapura) ವೃದ್ಧೆಯ ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಬಂಧಿಸಿದ್ಧಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಡಾಡ್ತಿದೆಯಂತೆ ಗುಜರಿ ಅಂಬುಲೆನ್ಸ್- ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!
Advertisement
Advertisement
2016ರ ಆಗಸ್ಟ್‌ನಲ್ಲಿ ಕೆಂಗೇರಿ ಸ್ಯಾಟಲೈಟ್‍ನಲ್ಲಿ (Satellite) ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರು ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಒಟ್ಟಿಗೆ ವಾಸವಾಗಿದ್ದರು. ಒಂದು ದಿನ ಮೊಮ್ಮಗ ಸಂಜಯ್ ಅಜ್ಜಿಗೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಗೋಬಿ ಮಂಚೂರಿಯನ್ನು (Gobi Manchuri) ತಂದು ಕೊಟ್ಟಿದ್ದ. ಆದರೆ ವಿಪರೀತ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದ ಶಾಂತಮ್ಮ, ಸಂಜಯ್ ಮುಖಕ್ಕೆ ಗೋಬಿ ಮಂಚೂರಿಯನ್ನು ಎಸೆದು ಬೈದಿದ್ದರು.
Advertisement
Advertisement
ಇದರಿಂದ ಕೋಪಗೊಂಡ ಸಂಜಯ್ ಅಜ್ಜಿ ತಲೆಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ಕೆಮಿಕಲ್ ಹಾಕಿ ಕಬೋರ್ಡ್‍ನಲ್ಲಿ ಮುಚ್ಚಿಟ್ಟು, ಊರಿಗೆ ಹೋಗಿ ಬರುತ್ತೇವೆ ಅಂತ ಯಾರಿಗೂ ಅನುಮಾನ ಬಾರದಂತೆ ತಾಯಿ-ಮಗ ಮನೆ ಖಾಲಿ ಮಾಡಿದ್ದರು. ಆರು ತಿಂಗಳ ಬಳಿಕ ಮನೆ ಓನರ್ ರಿಪೇರಿ ಕೆಲಸ ಮಾಡುವ ವೇಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ನಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಸಂಜಯ್ ಸ್ನೇಹಿತ ನಂದೀಶ್ ಎಂಬಾತನನ್ನು ಬಂಧಿಸಿದ್ದರು. ಅಲ್ಲದೇ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ತಾಯಿ – ಮಗ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ
ಸದ್ಯ ಕೊಲ್ಲಾಪುರದಲ್ಲಿ ತಾಯಿ, ಮಗ ವಾಸವಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಮೊಮ್ಮಗ ಸಂಜಯ್ ಎಂಜಿನಿಯರಿಂಗ್ ಮಾಡಿಕೊಂಡು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಇದೀಗ ಐದು ವರ್ಷದ ಬಳಿಕ ಕೊಲೆ ಆರೋಪಿಗಳಾದ ಶಶಿಕಲಾ ಮತ್ತು ಸಂಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.