48 ವರ್ಷ ಪ್ರೀತಿಸಿ 80ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ!

Public TV
1 Min Read
MARRIAGE

ಉದಯ್‍ಪುರ್: 80 ವರ್ಷದ ವೃದ್ಧರೊಬ್ಬರು 48 ವರ್ಷಗಳಿಂದ ಲಿವ್ ಇನ್ ರಿಲೇಶನ್‍ನಲ್ಲಿದ್ದ 76 ವರ್ಷದ ಪ್ರೇಯಸಿ ಜೊತೆ ಮೊದಲ ಪತ್ನಿಯ ಸಮ್ಮತಿಯೊಂದಿಗೆ ರಾಜಸ್ಥಾನ ಉದಯ್‍ಪುರದಲ್ಲಿ ಮದುವೆಯಾಗಿದ್ದಾರೆ.

ದೇವ್‍ದಾಸ್ ಕಸೌಲಾ ಅವರಿಗೆ ಈ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತರ 1970ರಲ್ಲಿ ತಾನು ಪಕ್ಕದ ಗ್ರಾಮದಲ್ಲಿದ್ದ ಗೆಳತಿ ಮಗ್ದುಬಾಯಿ ಜೊತೆ ಓಡಿ ಹೋಗಿದ್ದರು. ನಂತರ ತನ್ನ ಗ್ರಾಮಕ್ಕೆ ಮರಳಿ  ಗೆಳತಿಯ ಜೊತೆ ವಾಸಿಸುತ್ತಿದ್ದರು.

MARRIAGE 2 1

ದೇವ್‍ದಾಸ್ ಮೊದಲ ಪತ್ನಿ ಚಂಪಾ ಬಾಯಿ ತನ್ನ ಮಕ್ಕಳ ಮನೆಯಲ್ಲಿ ವಾಸಿಸುತ್ತಿದ್ದು, ದೇವ್‍ದಾಸ್ ತನ್ನ ಪ್ರೇಯಸಿ ಜೊತೆ ಪೂರ್ವಿಕರ ಮನೆಯಲ್ಲಿ ವಾಸವಾಗಿದ್ದರು. ಆದರೆ ಇವರಿಬ್ಬರ ಈ ಸಂಬಂಧಕ್ಕೆ ಯಾವುದೇ ಹೆಸರಿಲ್ಲದ ಕಾರಣ ದೇವ್‍ದಾಸ್‍ರ ಮೊದಲ ಪತ್ನಿಯ ಮಗ ಇವರಿಬ್ಬರನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ಈ ಮದುವೆಗೆ ಚಂಪಾ ಅನುಮತಿ ನೀಡಿದ್ದರು.

MARRIAGE 5

ಭಾಂಜನ ಸಂಪ್ರದಾಯದ ಪ್ರಕಾರ ಮಂಗಳವಾರ ದೇವ್‍ದಾಸ್ ಕಸೌಲಾ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ತೆರಳಿದ್ದರು. ನಂತರ ವರನ ಕಡೆಯವರು 50ಕೆ.ಜಿ ಅಕ್ಕಿ ಹಾಗೂ ವಧುವಿನ ಕಡೆಯವರು 10 ಕೆ.ಜಿ ಅಕ್ಕಿ ನೀಡಿದ್ದಾರೆ. ಈ ಅಕ್ಕಿಯಲ್ಲಿ ಭೋಜನವನ್ನು ತಯಾರಿಸಿ ಮದುವೆಗೆ ಬಂದ ಅತಿಥಿಗೆ ನೀಡಿದ್ದರು. ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಗ್ರಾಮದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದಾರೆ.

MARRIAGE 4

Share This Article
Leave a Comment

Leave a Reply

Your email address will not be published. Required fields are marked *