ಬೆಂಗಳೂರು: ಕಿಚ್ಚ ಸುದೀಪ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಾಲ್ಕು ವರ್ಷಗಳ ನಂತರ ಕಿಚ್ಚ ಸುದೀಪ್ ತಮಗಾಗಿ ಒಂದು ಕಾರನ್ನು ಖರೀದಿ ಮಾಡಿದ್ದಾರೆ.
ಕೆಂಪು ಬಣ್ಣದ ವೋಲ್ವೊ ಕಂಪೆನಿಯ ಕಾರು ಸೋಮವಾರ ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿದೆ. ಸದ್ಯ ಸುದೀಪ್ ಅವರ ಹೊಸ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೂರು ತಿಂಗಳ ಹಿಂದೆ ಸುದೀಪ್ ತನ್ನ ಅಕ್ಕನ ಮಗಳಿಗಾಗಿ ಜೀಪ್ ಖರೀದಿಸಿ ಅದನ್ನು ಗಿಫ್ಟ್ ಆಗಿ ನೀಡಿದ್ದರು. ಅದನ್ನು ಬಿಟ್ಟರೆ ಸುದೀಪ್ ತಮಗಾಗಿ ಎಂದು ನಾಲ್ಕು ವರ್ಷದಿಂದ ಯಾವುದೇ ಕಾರು ಖರೀದಿಸಿಲ್ಲ.
ಕಿಚ್ಚ ಸುದೀಪ್ ಅವರಿಗೂ ಕೂಡ ಕಾರುಗಳ ಕ್ರೇಜ್ ಇದೆ. ಹೊಸ ಕಾರಿನಲ್ಲಿ ಅವರಿಗೆ ಏನಾದರೂ ವಿಶೇಷವೆನಿಸಿದರೆ ಹಾಗೂ ಇಷ್ಟವಾದರೆ ಮಾತ್ರ ಆ ಕಾರನ್ನು ಖರೀದಿಸುತ್ತಾರೆ.
ಸುದೀಪ್ ಬಳಿ ಈಗಾಗಲೇ ರೇಂಜ್ ರೋವರ್, ಬಿಎಂಡಬ್ಲ್ಯೂ, ಫೋರ್ಡ್ ಸೇರಿದಂತೆ ಹಲವಾರು ಬೇರೆ ಬೇರೆ ಕಂಪೆನಿಯ ಕಾರುಗಳು ಇದೆ. ಅಲ್ಲದೇ ತಮ್ಮ ಬಳಿಯಿರುವ ಕಾರುಗಳಲ್ಲಿ ಒಂದು ಕಾರನ್ನು ಮಾರಾಟ ಮಾಡಿದ್ದರು. ನಂತರ ಅದರಿಂದ ಬಂದ ಹಣವನ್ನು ‘ವಿ ರೆಸ್ಪೆಕ್ಟ್ ಫಾರ್ಮರ್ಸ್’ ಟ್ರಸ್ಟ್ ಗೆ ಕಿಚ್ಚ ಸುದೀಪ್ ಹಣ ನೀಡಿ, ರೈತರಿಗೆ ಸಹಾಯ ಮಾಡಿದ್ದರು.