ಗಾಂಧೀನಗರ: ಗುಜರಾತ್‌ನಲ್ಲಿ (Gujarat) ವ್ಯಕ್ತಿಯೊಬ್ಬ 20 ರೂ. ಲಂಚ ಪಡೆದಿದ್ದಕ್ಕಾಗಿ 30 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಪ್ರಕರಣದಲ್ಲಿ ಆತ ನಿರಪರಾಧಿ ಎಂದು ಸಾಬೀತಾದ ಮರುದಿನವೇ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಜೀವನದಲ್ಲಿ ನನಗೆ ಅಂಟಿದ್ದ ಕಳಂಕವನ್ನು ತೆಗೆದುಹಾಕಲಾಗಿದೆ. ಈಗ ದೇವರು ನನ್ನನ್ನು ಕರೆದುಕೊಂಡು ಹೋದರೂ ನನಗೆ ಯಾವುದೇ ದುಃಖ ಇರಲ್ಲ ಎಂದು ವ್ಯಕ್ತಿ, ಫೆಬ್ರವರಿ 4 ರಂದು ಗುಜರಾತ್ ಹೈಕೋರ್ಟ್ ತೀರ್ಪಿನ ಬಳಿಕ ಮಾತನಾಡಿದ್ದ. ಇದನ್ನೂ ಓದಿ: ಹೋಂವರ್ಕ್ ಮಾಡದ ಮಗುವಿಗೆ ನೂರವೈತ್ತು ಬಾರಿ ಥಳಿಸಿದ ಶಿಕ್ಷಕ
ಪೊಲೀಸ್ ಕಾನ್‌ಸ್ಟೆಬಲ್ ಬಾಬುಭಾಯಿ ಪ್ರಜಾಪತಿ ಅವರನ್ನು ಅಹಮದಾಬಾದ್‌ನಲ್ಲಿ ನಿಯೋಜಿಸಲಾಗಿತ್ತು. ಆಗ 20 ರೂ. ಲಂಚ ಪಡೆದ ಆರೋಪ ಅವರ ಮೇಲಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿತ್ತು.

1997 ರಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. 2002 ರಲ್ಲಿ ಆರೋಪಗಳನ್ನು ರೂಪಿಸಲಾಯಿತು. ಸಾಕ್ಷಿಗಳ ವಿಚಾರಣೆ 2003 ರಲ್ಲಿ ಪ್ರಾರಂಭವಾಯಿತು. 2004 ರಲ್ಲಿ ಸೆಷನ್ಸ್ ನ್ಯಾಯಾಲಯವು ಪ್ರಜಾಪತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 3,000 ರೂ. ದಂಡವನ್ನು ವಿಧಿಸಿತ್ತು.
ಪ್ರಜಾಪತಿ ಗುಜರಾತ್ ಹೈಕೋರ್ಟ್‌ನಲ್ಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದರು. ನಂತರ, ಅವರ ಮೇಲ್ಮನವಿ 22 ವರ್ಷಗಳ ಕಾಲ ಬಾಕಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಅವರು ನಿರಪರಾಧಿ ಎಂದು ತೀರ್ಪು ಬಂದಿದೆ. ಇದನ್ನೂ ಓದಿ: ರೀಲ್ಸ್ ಗೀಳು – ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವು
ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿವೆ. ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಜಾಪತಿ ಪರ ವಾದ ಮಂಡಿಸಿದ ವಕೀಲ ನಿತಿನ್ ಗಾಂಧಿ, ಇಡೀ ಪ್ರಕರಣವು ಅನುಮಾನದಿಂದ ಕೂಡಿದೆ ಎಂದು ವಾದಿಸಿದ್ದರು.
ತೀರ್ಪಿನ ನಂತರ, ಪ್ರಜಾಪತಿ ತನ್ನ ವಕೀಲರ ಕಚೇರಿಯಲ್ಲಿ ಹೃದಯಸ್ಪರ್ಶಿ, ಪ್ರವಾದಿಯ ಸಾಲುಗಳನ್ನು ಹೇಳಿದರು. ನಂತರ ಅವರು ಮನೆಗೆ ಮರಳಿದರು. ಮರುದಿನವೇ ಅವರು ನಿಧನರಾಗಿದ್ದಾರೆ.

