ಮೈಸೂರು: ಭಾನುವಾರ ಕಾರಿನಲ್ಲಿ ಬ್ಯಾರಿಕೇಡ್ ಗೆ ಗುದ್ದಿ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಉದ್ಧಟತನ ಪ್ರದರ್ಶನ ಮಾಡಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ನ್ಯಾಯಧೀಶರ ಮುಂದೆ ನಿಲ್ಲಿಸುವ ಬದಲು ಇಡೀ ರಾತ್ರಿ ರೌಂಡ್ ಹೊಡೆಸಿ ನಂತರ ಬಿಡುಗಡೆಗೊಳಿಸಿದ್ದಾರೆ.
ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು, ನರಸೀಪುರ ಸೇರಿದಂತೆ ಮೊದಲಾದ ಕಡೆ ಸುಮಾರು 8 ಗಂಟೆ ಕಾಲ ರೌಂಡ್ ಹೊಡೆಸಿದ ನಂತರ ರಾತ್ರಿ 11 ಗಂಟೆ ಹೊತ್ತಿಗೆ ಟೀ ನರಸೀಪುರ ಪಟ್ಟಣ ಠಾಣೆಗೆ ಪ್ರತಾಪ್ ಸಿಂಹರನ್ನು ಕರೆತರಲಾಯಿತು. ಅಲ್ಲಿ ಪ್ರತಾಪ್ ಸಿಂಹ ಸ್ಟೇಷನ್ ಬೇಲ್ ಪಡೆದು ರಿಲೀಸ್ ಆಗಿದ್ದಾರೆ.
Advertisement
ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿಮಗೆ ನಿಮ್ಮ ಅಹಂ ದೊಡ್ಡದಾಗಿತ್ತು. ಆದರೆ ಅದು ನಿಮ್ಮ ಮನಸ್ಥಿತಿಯಲ್ಲಿರುವ ಲೋಪ. ಅದನ್ನು ಅಡ್ಡ ತಂದು ನಮ್ಮ ಮೇಲೆ ಗಧಾಪ್ರಹಾರ ಮಾಡಬೇಡಿ. 2015ರಲ್ಲಿ ನೀವು ಬ್ಯಾನ್ ಮಾಡಿದ 3 ರಸ್ತೆಯಲ್ಲಿ ಸುಸೂತ್ರವಾಗಿ ಹನುಮ ಜಯಂತಿ ನಡೆದಿತ್ತು. ಆದರೆ ಇದೀಗ ಅವಕಾಶವೇ ಕೊಡುತ್ತಿಲ್ಲ. ನಾನೊಬ್ಬ ಸಂಸದನಾಗಿ ಹುಣಸೂರಿಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತೀನಿ ಎಂದು ನಿಮಗೆ ಕನಸು ಬಿದ್ದಿತ್ತಾ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.