ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever Virus) ಪ್ರಕರಣ ಪತ್ತೆಯಾಗಿದೆ.
ಹೆಬ್ಬರಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ಹಂದಿ ಫಾರಂನಲ್ಲಿ ಈ ಮಾರಕ ವೈರಸ್ ಪತ್ತೆಯಾಗಿದೆ. ಕಳೆದೊಂದು ವಾರದಿಂದ ಫಾರಂ ನಲ್ಲಿನ ಹಲವು ಹಂದಿಗಳು ಧಿಡೀರ್ ಅಂತ ಸಾವನ್ನಪ್ಪುತ್ತಿದ್ದು. ಇದರಿಂದ ಆತಂಕಗೊಂಡ ಮಾಲೀಕ ಪಶುಪಾಲನಾ ಇಲಾಖೆ (Veterinary Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ
ಬಳಿಕ ಪಶುಪಾಲನಾ ಇಲಾಖೆ ಅಧಿಕಾರಿಗಳು ಸತ್ತ ಹಂದಿಗಳ ಮಾದರಿಗಳನ್ನ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದರು. ಪರೀಕ್ಷೆ ವೇಳೆ ಹಂದಿ ಜ್ವರ ಇರೋದು ದೃಢವಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಹಾಗೂ ಪಶುಪಾಲನಾ ಇಲಾಖೆ ಹೈಅಲರ್ಟ್ ಆಗಿದ್ದು ಹಂದಿ ಜ್ವರ ಕಡಿವಾಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಕೆ ಮುಂದಾಗಿದೆ. ಫಾರಂ ನಲ್ಲಿ ಉಳಿದ ಹಂದಿಗಳನ್ನ ಕೊಲ್ಲೋಕೆ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?
ಏನಿದು ಹಂದಿ ಜ್ವರ?
ಆಫ್ರಿಕನ್ ಹಂದಿ ಜ್ವರ (ASF) ಎಂಬುದು ವೈರಸ್‌ನಿಂದ ಹಂದಿಗಳಲ್ಲಿ ಉಂಟಾಗುವ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. 100% ವರೆಗೆ ಮರಣ ಪ್ರಮಾಣ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದ್ರೆ ಇದು ಮಾನವರಿಗೆ ಹರಡುವುದಿಲ್ಲ. ಈ ರೋಗವು ಹಂದಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.
ಹೇಗೆ ಹರಡುತ್ತೆ?
ಆಫ್ರಿಕನ್ ಹಂದಿ ಜ್ವರವು ASFV ಎಂಬ ವೈರಸ್‌ನಿಂದ ಹರಡುತ್ತೆ. ಇದನ್ನೂ ಓದಿ: ಬೆಂಗ್ಳೂರಿನಿಂದ ಒಸಾಕಾ, ನಗೋಯ ನಗರಗಳಿಗೆ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ ಪಾಟೀಲ್