ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಇಲ್ಲಿನ ಹಂದಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದು ಕೊಂದ ಹಂದಿಗಳನ್ನು ಹೂಳಲಾಗಿದೆ. ಅದೇ ಸಮಯದಲ್ಲಿ, ನಾವು ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ, ಏಕಕಾಲದಲ್ಲಿ ಶುಚಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಅಷ್ಟೇ, ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹೀಗಾಗಿ ಆತಂಕಕೊಳ್ಳಕಾಗಬಾರದೆಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ
Advertisement
ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020 ರಿಂದ 2022ರ ಜುಲೈ 11ರ ವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. 1,181 ಹಂದಿಗಳನ್ನು ಕೊಲ್ಲಲಾಗಿದೆ ಎಂದಿದ್ದಾರೆ.
Advertisement
ಎಲ್ಲೆಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ?
ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ.
ಈ ಜ್ವರವು ಸಾಂಕ್ರಾಮಿಕವಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇದಕ್ಕೆ ಸೂಕ್ತ ಲಸಿಕೆಯೂ ಇಲ್ಲದಿರುವುದರಿಂದ ಹಂದಿ ಮಾಂಸ ತಿನ್ನುವುದನ್ನು ತಪ್ಪಿಸುವಂತೆ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಇದನ್ನೂ ಓದಿ: ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್
ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸಬೇಕು, ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಅಥವಾ ಜ್ವರದಿಂದ ಸಾವನ್ನಪ್ಪಿದ ಪ್ರಕರಣಗಳ ಬಗ್ಗೆ ನಿಗಾ ವಹಿಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.