ತಿರುವನಂತಪುರಂ: ಕೇರಳದ (Kerala) ಮಲಪ್ಪುರಂ (Malappuram) ಜಿಲ್ಲೆಯಲ್ಲಿ ನಡೆದ ಫುಟ್‍ಬಾಲ್ ಪಂದ್ಯಾವಳಿಯ ವೇಳೆ ಆಫ್ರಿಕಾದ ಫುಟ್‍ಬಾಲ್ ಆಟಗಾರನನ್ನು (African footballer) ಪ್ರೇಕ್ಷಕರು ಹಿಂಬಾಲಿಸಿ ಥಳಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನೀಲಿ ಟೀ ಶರ್ಟ್ ಧರಿಸಿದ್ದ ಆಫ್ರಿಕಾದ, ದೈರ್ರಾಸೌಬ ಹಾಸನ್ ಜೂನಿಯರ್ ಎಂಬ ವ್ಯಕ್ತಿಯನ್ನು ಅರೀಕೋಡ್‍ನ ಮೈದಾನದಲ್ಲಿ ಜನರ ಗುಂಪು ಅಟ್ಟಾಡಿಸಿದ್ದಾರೆ. ಬಳಿಕ ಆಟಗಾರನನ್ನು ಜನರು ಹಿಡಿದು ಥಳಿಸಿರುವುದು ದಾಖಲಾಗಿದೆ. ಜನರ ಗುಂಪು ತನ್ನನ್ನು ಜನಾಂಗೀಯ ನಿಂದನೆ (Racially Abused) ಮಾಡಿ, ಹಲ್ಲೆ ನಡೆಸಿದೆ ಎಂದು ದೈರ್ರಾಸೌಬ ಹಾಸನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ, ಅಸಭ್ಯ ಕಂಟೆಂಟ್ ಪ್ರಸಾರ; 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ನಿರ್ಬಂಧ
Advertisement
Advertisement
ಈ ಬಗ್ಗೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಫುಟ್ಬಾಲ್ ಆಟಗಾರನು ತನ್ನ ತಂಡಕ್ಕೆ ಕಾರ್ನರ್ ಕಿಕ್ ಸಿಕ್ಕಿತು ಮತ್ತು ಅವನು ತನ್ನ ಸ್ಥಾನವನ್ನು ಪಡೆದುಕೊಳ್ಳಲು ಮುಂದಾದಾಗ, ಪ್ರೇಕ್ಷಕರು ತನ್ನನ್ನು ಜನಾಂಗೀಯ ನಿಂದನೆ ಮಾಡಿದರು. ಗುಂಪು ತನ್ನ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದೂ ಆರೋಪಿಸಿದ್ದಾರೆ.
Advertisement
Advertisement
ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಜವಾಹರ್ ಮಾವೂರ್ ಎಂಬ ಫುಟ್ಬಾಲ್ ಕ್ಲಬ್‍ನ್ನು ಹಾಸನ್ ಜೂನಿಯರ್ ಪ್ರತಿನಿಧಿಸುತ್ತಿದ್ದರು. ಸೆವೆನ್ಸ್ ಫುಟ್ಬಾಲ್ ಮಲಪ್ಪುರಂನಲ್ಲಿ ಪ್ರಸಿದ್ಧ ಕ್ರೀಡಾಕೂಟವಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಾಡಹಗಲೇ ಚಿನ್ನದಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ