ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸಂಬಂಧಿತ ಫೇಸ್‌ಬುಕ್‌ನಂತಹ ಪುಟಗಳನ್ನು ಮೆಟಾ ಬ್ಯಾನ್ ಮಾಡಿದ ಬಳಿಕ ಇದೀಗ ಅಫ್ಘನ್ ಜನರು ಟ್ವಿಟ್ಟರ್‌ನಲ್ಲಿ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ತಾಲಿಬಾನ್ ಅನ್ನು ಬ್ಯಾನ್ ಮಾಡಿ ಎಂಬ ಕರೆಯೊಂದಿಗೆ ಅಫ್ಘನ್ನರು ಸಾವಿರಾರು ಟ್ವೀಟ್‌ಗಳನ್ನು ಮಾಡಿದ್ದಾರೆ.
BanTaliban ಹ್ಯಾಶ್ ಟ್ಯಾಗ್ ಬಳಸಿ ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಯುರೋಪ್, ಭಾರತ ಹಾಗೂ ಅಮೆರಿಕದಲ್ಲೂ ಜನರು ಟ್ವೀಟ್ ಮಾಡಿ, ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್ ಹಾರಾಟ
Advertisement
Advertisement
ವರದಿಗಳ ಪ್ರಕಾರ ಅಫ್ಘಾನಿಸ್ತಾನದ ಪತ್ರಕರ್ತರು, ನಾಗರಿಕ ಕಾರ್ಯಕರ್ತರು, ವಕೀಲರು ಟ್ವಿಟ್ಟರ್ ಬಳಸುವ ಎಲ್ಲಾ ತಾಲಿಬಾನ್ ಸದಸ್ಯರಿಗೂ ಪ್ರವೇಶ ನಿಷೇಧಿಸುವಂತೆ ಟ್ವಿಟ್ಟರ್ ಅನ್ನು ಒತ್ತಾಯಿಸಿದ್ದಾರೆ. ತಾಲಿಬಾನ್ ತಪ್ಪು ಮಾಹಿತಿ ಹರಡುವಿಕೆ, ಹಿಂಸಾಚಾರ, ಶಿರಚ್ಛೇದದ ಕರೆಗಳು, ಭಯೋತ್ಪಾದಕರಿಗೆ ಬೆಂಬಲ ನೀಡುವುದು ಸೇರಿದಂತೆ ಹಲವು ಆಘಾತಕರ ವಿಷಯಗಳನ್ನು ಈ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜನರು ಈ ಅಭಿಯಾನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!
Advertisement
Advertisement
ಬುಧವಾರ ಫೇಸ್‌ಬುಕ್ ಆರ್‌ಟಿಎ ಟಿವಿ ಚಾನೆಲ್ ಹಾಗೂ ಬಕ್ತರ್ ನ್ಯೂಸ್ ಏಜೆನ್ಸಿ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ತಾಲಿಬಾನ್ ಸಂಬಂಧಿತ ವಿಷಯಗಳನ್ನು ಹಾಗೂ ಪುಟಗಳನ್ನು ನಿಷೇಧಿಸಿತ್ತು. ಮೆಟಾದ ಈ ನಿರ್ಧಾರವನ್ನು ಅಫ್ಘನ್ ಜನರು ಸ್ವಾಗತಿಸಿದ್ದಾರೆ. ಮೆಟಾದ ಕ್ರಮದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲೂ ತಾಲಿಬಾನ್‌ಗೆ ನಿಷೇಧ ಹೇರುವಂತೆ ಒತ್ತಾಯಿಸಿ ಜನರು ಅಭಿಯಾನ ಪ್ರಾರಂಭಿಸಿದ್ದಾರೆ.