ಕಾಬೂಲ್: ತಾಲಿಬಾನಿಗಳ ಗೋಮುಖ-ವ್ಯಾಘ್ರ ಮುಖವಾಡ ಕಳಚಿದೆ. ನಾವು ಬದಲಾಗಿದ್ದೇವೆ. ನಾವು ಸರ್ವಧರ್ಮ ಸಹಿಷ್ಣುಗಳು, ಹೆಂಗಸರು ಸೇರಿದಂತೆ ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ಮಾಡಲ್ಲ ಅಂತೆಲ್ಲಾ ಮಂಗಳವಾರ ಪುಂಖಾನುಪುಂಖವಾಗಿ ಬೊಗಳೆಬಿಟ್ಟಿದ್ದ ತಾಲಿಬಾನಿಗಳ ಸಂಸ್ಕೃತಿ ಮಾರನೇ ದಿನವೇ ಜಾಹೀರಾಗಿದೆ.
ರಾಜಧಾನಿ ಕಾಬೂಲ್‍ನಲ್ಲಿ ನಾಲ್ವರು ಕಮಾಂಡರ್ ಗಳನ್ನು ಗುಂಡಿಕ್ಕಿ ಕೊಂದಿದ್ದಾರೆ. ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಬಲಿಯಾಗಿ, ಹಲವಾರು ಮಂದಿ ಗಾಯಗೊಂಡಿದ್ದಾರೆ.
Advertisement
Advertisement
ಅಫ್ಘಾನಿಸ್ತಾನದಲ್ಲಿ ಇಂದು ಏನೇನಾಗಿದೆ..?
ಗೋಡೆ ಹತ್ತಿದವನಿಗೆ ಗುಂಡು: ಬೃಹತ್ ಗೋಡೆ ಹತ್ತಿ ಏರ್‍ಪೋರ್ಟ್‍ಗೆ ತಲುಪಲು ಯತ್ನಿಸಿದ ನಾಗರಿಕನೊಬ್ಬನಿಗೆ ತಾಲಿಬಾನ್ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಬೇಡ ಬೇಡ ಅಂತ ಗೋಗರೆದರೂ ಗುಂಡು ಸಿಡಿಸಿದ್ದಾನೆ. ಬೆಚ್ಚಿದ ನಾಗರಿಕ ಗೋಡೆ ಮೇಲಿಂದ ಬಿದ್ದಿದ್ದಾನೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಸಂಸದ ಬರ್ಖ್, ಓವೈಸಿ ಸಪೋರ್ಟ್ – ಸ್ವಾತಂತ್ರ್ಯ ಹೋರಾಟಗಾರರಿಗೆ ಉಗ್ರರ ಹೋಲಿಕೆ
Advertisement
ಇಬ್ಬರಿಗೆ ಗುಂಡೇಟು: ಮತ್ತೊಂದು ಕಡೆ ಜಲಾಲಾಬಾದ್‍ನಲ್ಲಿ ಅಫ್ಘಾನ್ ಬಾವುಟ ತೆರವು ವಿಚಾರವಾಗಿ ಸ್ಥಳೀಯರು ಮತ್ತು ತಾಲಿಬಾನಿಗಳ ಮಧ್ಯೆ ಸಂಘರ್ಷ ನಡೆದಿದೆ. ಪ್ರತಿಭಟನೆಗೆ ಮುಂದಾದ ಸ್ಥಳೀಯರ ಮೇಲೆ ತಾಲಿಬಾನಿಗಳು ಗುಂಡಿನ ದಾಳಿ ಮಾಡಿದ್ದಾರೆ. ಇಬ್ಬರು ಬಲಿಯಾಗಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Advertisement
ವಿರೋಧಿಸಿದರೆ ಗುಂಡೇಟು: ಮನೆ ಮನೆಗೂ ನುಗ್ತಿರೋ ತಾಲಿಬಾನಿಗಳಿಗೆ ಯಾರಾದರೂ ವಿರೋಧ, ಪ್ರತಿರೋಧ ತೋರಿದರೆ ಒದ್ದು ಮನೆಗೆ ದಬ್ಬುತ್ತಿದ್ದಾರೆ. ಜೊತೆಗೆ, ಮನೆಯ ಮುಂದೆಯೇ ಮಂಡಿಯೂರಿಸಿ ಹಿಂದಿನಿಂದ ಗುಂಡು ಹಾರಿಸಿ ಕೊಲ್ಲುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ
ತಾಲಿಬಾನ್ ವಿರುದ್ಧ ಪ್ರತಿಭಟನೆ: ತಾಲಿಬಾನಿಗಳ ವಿರುದ್ಧ ಆಫ್ಘನ್ ಜನರೇ ಸೆಟೆದು ನಿಂತಿದ್ದಾರೆ. ನಿಮ್ಮ ದಬ್ಬಾಳಿಕೆ, ದರ್ಬಾರ ಬೇಕಾಗಿಲ್ಲ. ನೀವು ದೇಶ ಬಿಟ್ಟು ತೊಲಗಿ ಅಂತ ಅಫ್ಘಾನ್ ಧ್ವಜ ಹಿಡಿದು, ಬಸ್‍ಗಳನ್ನೇರಿ ಬೃಹತ್ ಸಂಖ್ಯೆಯಲ್ಲಿ ಜನ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.
ಕಾರ್ ಗಳೆಲ್ಲಾ ತಾಲಿಬಾನ್‍ಮಯ: ತಾಲಿಬಾನಿಗಳು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂದರೆ ಯಾವುದೇ ನಗರದಲ್ಲಿ ಕಾರ್‍ಗಳು ಕಂಡರೆ ಸಾಕು ಅವನ್ನು ಕಸಿದುಕೊಂಡು ಅವುಗಳಲ್ಲಿ ಶಸ್ತ್ರಾಸ್ತ್ರ ತುಂಬಿಕೊಂಡು ಮೆರವಣಿಗೆ ಹೊರಟು ಜನರಲ್ಲಿ ಭೀತಿ ಮನೆ ಮಾಡುವಂತೆ ಮಾಡ್ತಿದ್ದಾರೆ.
ಮಹಿಯರಿಗೆ ಕಿರುಕುಳ: ನಾವು ಮಹಿಳೆಯರನ್ನು ಗೌರವಿಸ್ತೇವೆ. ಷರಿಯಾ ಕಾನೂನಡಿ ಅವರಿಗೂ ಸಮಾನ ಹಕ್ಕುಗಳಿವೆ ಅಂತ ನಿನ್ನೆ ತಾಲಿಬಾನ್ ನಾಯಕರು ಹೇಳಿದ್ದರು. ಆದರೆ, ಇವತ್ತು ತಾಲಿಬಾನಿಗಳಿ ಕಿರುಕುಳ ಕೊಟ್ಟಿರೋದು ವರದಿಯಾಗಿದೆ. ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಕೆಲವು ಮಹಿಳೆಯರು ಧರ್ಮದ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ
ಕುರ್ಚಿ ಕಾದಾಟ: ಒಂದೆಡೆ ತಾಲಿಬಾನಿಗಳು ಸರ್ಕಾರ ರಚನೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬೆನ್ನಲ್ಲಿ ಉಪಾಧ್ಯಕ್ಷ ಅಮರುಲ್ಲಾ ಸಲೇ ನಾನೇ ಅಧ್ಯಕ್ಷ ಅಂತ ನಿನ್ನೆ ಘೋಷಿಸಿಕೊಂಡಿದ್ದ. ಇಂದು ಘನಿ ಫೋಟೋ ತೆಗೆದು ತನ್ನ ಫೋಟೋ ಹಾಕಿಕೊಂಡಿದ್ದಾನೆ. ಹಣದ ಜೊತೆ ದೇಶ ತೊರೆದಿದ್ದ ಘನಿ, ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ.
ಬರಾದರ್ ಮರು ಪ್ರವೇಶ: ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ 20 ವರ್ಷಗಳ ಬಳಿಕ ಕತಾರ್‍ನಿಂದ ಕಂದಹಾರ್ ಮೂಲಕ ಕಾಬೂಲ್ ಪ್ರವೇಶಿಸಿದ್ದಾನೆ. ಮೂಲಗಳ ಪ್ರಕಾರ ಈತನೇ ಅಫ್ಘಾನಿಸ್ತಾನದ ಅಧ್ಯಕ್ಷನಾಗುವ ಸಾಧ್ಯತೆ ಇದೆ.
ಕರ್ಜೈ-ತಾಲಿಬಾನ್ ಭೇಟಿ: ಸರ್ಕಾರ ರಚನೆ ಕಸರತ್ತಿಗೆ ಚುರುಕು ಕೊಟ್ಟಿರೋ ತಾಲಿಬಾನ್, ಕಮಾಂಡರ್ ಅನಸ್ ಹಕ್ಕಾನಿಯನ್ನು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ನಿವಾಸಕ್ಕೆ ಕಳಿಸಿ ಮಾತುಕತೆ ನಡೆಸಿದೆ. ಈ ವೇಳೆ ಹಿಂದಿನ ಸರ್ಕಾರ ಪ್ರಮುಖ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸಾಥ್ ನೀಡಿದ್ದರು. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್
ಶಿಯಾ ನಾಯಕನ ಪ್ರತಿಮೆ ಧ್ವಂಸ: 1990ರ ಅಫ್ಘಾನಿಸ್ತಾನದ ಅಂತರ್ಯುದ್ಧದ ಸಮಯದಲ್ಲಿ ತಾಲಿಬಾನ್ ವಿರುದ್ಧ ಹೋರಾಡಿದ್ದ ಶಿಯಾ ನಾಯಕ ಅಬ್ದುಲ್ ಅಲಿ ಮಜಾರಿ ಪ್ರತಿಮೆಯನ್ನು ತಾಲಿಬಾನ್ ಸ್ಫೋಟಿಸಿದ್ದಾರೆ. ಈ ಮಧ್ಯೆ ಅಫ್ಘನ್ ಮಹಿಳೆಯರು ದಿನಸಿಗೂ ಹೆಚ್ಚಾಗಿ ಬುರ್ಖಾ ಖರೀದಿಗೆ ಮುಗಿಬಿದ್ದಿದ್ದಾರೆ.