ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು

Advertisements

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನಿಗಳು ಫುಲ್ ಬಿಂದಾಸ್ ಮೂಡ್‍ನಲ್ಲಿದ್ದು, ಕಾಬೂಲ್ ವಶಪಡಿಸಿಕೊಂಡ ಮರುದಿನ ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಜಾ ಮಾಡಿದ್ದಾರೆ.

Advertisements

ಶಸ್ತ್ರಾಸ್ತ್ರ ಹಿಡಿದುಕೊಂಡೇ ಎಲೆಕ್ಟ್ರಿಕ್ ಬಂಪರ್ ಕಾರ್ ಗಳಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಮಕ್ಕಳು ಆಟವಾಡುವ ಕುದುರೆಗಳ ಮೇಲೆ ಸಹ ಹತ್ತಿ ಆಟವಾಡಿದ್ದಾರೆ. ಈ ವೀಡಿಯೋಗಳು ಇದೀಗ ಸಖತ್ ವೈರಲ್ ಆಗಿವೆ.

Advertisements

ಮತ್ತೊಂದೆಡೆ ಅಫ್ಘಾನಿಸ್ತಾನದಲ್ಲಿನ ಜನ ದಿಕ್ಕಾಪಾಲಾಗಿ ಓಡುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೇನಾ ವಿಮಾನ ಟೇಕ್ ಆಫ್ ಆಗುತ್ತಿದ್ದಾಗ ಸಹ ವಿಮಾನ ಏರಿ ಪರಾರಿಯಾಗಲು ಯತ್ನಿಸಿದ್ದರು. ಈ ವೀಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

ಅಫ್ಘಾನಿಸ್ತಾನ ಅಮೆರಿಕದ ಹಿಡಿತದಲ್ಲಿದ್ದಾಗ ಯುವ ರಾಷ್ಟ್ರೀಯವಾದಿಗಳು ಅಮೆರಿಕ ಸರ್ಕಾರಕ್ಕೆ ಹೆಚ್ಚು ಸಹಾಯ ಮಾಡಿದ್ದರು. ಹೀಗಾಗಿ ಅಮೆರಿಕದ ಸೇನಾ ವಿಮಾನ ಆಗಮಿಸುತ್ತಿದ್ದಂತೆ ವಿಮಾನ ಏರಲು ಯತ್ನಿಸಿದ್ದರು. ಈ ವೀಡಿಯೋ ಸಿಕ್ಕಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ:  ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

Advertisements

ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತವೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದರು. ಇದರಿಂದಾಗಿ ವಿಮಾನದಿಂದ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

Advertisements
Exit mobile version