ಕಾಬೂಲ್: ಆರ್ಥಿಕ ಸಂಬಂಧ ಬೆಳೆಸುವ ಹೆಸರಿನಲ್ಲಿ ಆ ದೇಶವನ್ನೇ ಲೂಟಿ ಮಾಡುವ ಚಾಳಿ ಬೆಳೆಸಿಕೊಂಡಿರುವ ಚೀನಾಗೆ (China) ಈಗ ಅಫ್ಘಾನಿಸ್ತಾನ (Afghanistan) ಬಿಸಿ ಮುಟ್ಟಿಸಿದೆ.
ಕಳ್ಳಸಾಗಣೆಯಲ್ಲಿ (Smuggling Precious Stones) ತೊಡಗಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ. 1,000 ಮೆಟ್ರಿಕ್ ಟನ್ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ.
Advertisement
ಚೀನಾ ಪ್ರಜೆಗಳು ಅಫ್ಘಾನ್ ವ್ಯಕ್ತಿಗಳ ಜೊತೆ ಸೇರಿ ಪಾಕಿಸ್ತಾನದ ಮೂಲಕ ಬೆಲೆಬಾಳುವ ಕಲ್ಲುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ
Advertisement
Advertisement
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಹೋಗಿರುವ ಡ್ಯುರಾಂಡ್ ಗಡಿ ರೇಖೆಯ ಉದ್ದಕ್ಕೂ ಇರುವ ಅಫ್ಘಾನ್ ಪ್ರಾಂತ್ಯಗಳಾದ ನುರಿಸ್ತಾನ್ ಮತ್ತು ಕುನಾರ್‌ನಿಂದ ಅಕ್ರಮವಾಗಿ ಈ ಬಡೆಯನ್ನು ಹೊರತೆಗೆಯಲಾಗಿದೆ. ವಶಪಡಿಸಿಕೊಳ್ಳಲಾದ ಬಂಡೆಗಳಲ್ಲಿ 30 ಪ್ರತಿಶತದಷ್ಟು ಲಿಥಿಯಯಂ ಇದೆ ತಾಲಿಬಾನ್ ಗುಪ್ತಚರ ಅಧಿಕಾರಿಗಳು ಅಫ್ಘಾನ್ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದ್ದಾರೆ.
Advertisement
ಅಸ್ಥಿರತೆಯಿಂದಾಗಿ ಚೀನಾ ಅಫ್ಘಾನಿಸ್ತಾನದೊಂದಿಗೆ ಎಚ್ಚರಿಕೆಯಿಂದ ವ್ಯವಹಾರ ನಡೆಸುತ್ತಿದೆ. ಅಗ್ಗದ ಸರಕುಗಳ ಸೀಮಿತ ವ್ಯಾಪಾರವನ್ನು ಹೊರತುಪಡಿಸಿ ಚೀನಿಯರು ಅಫ್ಘಾನಿಸ್ತಾನದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k