– ಸೇನಾಧಿಕಾರಿ ಕಣ್ಣಿಗೆ ಬಟ್ಟೆ ಹಾಕಿ ರಣಭೀಕರ ಹತ್ಯೆ
– ಉಗ್ರರಿಂದ ಮಕ್ಕಳ ರಕ್ಷಿಸಲು ಪೋಷಕರ ಒದ್ದಾಟ
ಕಾಬೂಲ್: ನಾವು ಬದಲಾಗಿದ್ದೇವೆ, ನಾವು ಉದಾರವಾದಿಗಳು. ಪ್ರತೀಕಾರ ತೆಗೆದುಕೊಳ್ಳಲ್ಲ, ಎಲ್ಲರನ್ನು ಕ್ಷಮಿಸಿದ್ದೇವೆ ಅಂತ ತಾಲಿಬಾನಿಗಳು ಮೊನ್ನೆಯಷ್ಟೇ ಹೇಳಿದ್ರು. ಆದರೆ ಸೈತಾನರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಅಫ್ಘಾನಿಸ್ತಾನದಲ್ಲಿ ಕಾಣುತ್ತಿದ್ದೇವೆ. ರಾಕ್ಷಸಿ ಸಂತಾನ ತಾಲಿಬಾನಿಗಳಿಂದ ನರಬೇಟೆ ಶುರುವಾಗಿದೆ.
Advertisement
ಅಫ್ಘಾನ್ ಧ್ವಜ ಹಾರಿಸಿದ್ರು ಎಂಬ ಕಾರಣಕ್ಕೆ ನಡುಬೀದಿಯಲ್ಲೇ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ವಿರೋಧಿಗಳನ್ನು ಹಿಂಸಿಸತೊಡಗಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಶೋಧ ಕಾರ್ಯ ನಡೆಸ್ತಿದ್ದಾರೆ. ವಿರೋಧಿಗಳ ಸುಳಿವು ನೀಡಿ ಎಂದು ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕ್ತಿದ್ದಾರೆ. ಅವರು ಶರಣಾದ್ರೆ ಏನೂ ಮಾಡಲ್ಲ.. ಇಲ್ಲ ಅಂದ್ರೆ ಕೊಂದು ಹಾಕ್ತೀವಿ ಅಂತಾ ವಾರ್ನಿಂಗ್ ನೀಡತೊಡಗಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ
Advertisement
Advertisement
ಬದ್ಗೀಸ್ ಪ್ರಾಂತ್ಯದಲ್ಲಂತೂ ಓರ್ವ ಸೇನಾಧಿಕಾರಿಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾರೆ. ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಗುಂಡಿನ ಮಳೆಗೈದಿದ್ದಾರೆ. ಕೆಲವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಅಫ್ಘನ್ನರು ಆತಂಕದಲ್ಲಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಅಫ್ಘನ್‍ನಿಂದ ಎಸ್ಕೇಪ್ ಆಗಲು ನೋಡ್ತಿದ್ದಾರೆ. ಏರ್‍ಪೋರ್ಟ್ ಯಾವಾಗ ಓಪನ್ ಆಗುತ್ತೆ ಅಂತಾ ಕಾಯ್ತಿದ್ದಾರೆ. ಆದರೆ ಆಫ್ಘನ್ನರನ್ನು ವಿದೇಶಕ್ಕೆ ಹೋಗಲು ತಾಲಿಬಾನಿಗಳು ಬಿಡ್ತಿಲ್ಲ. ಏರ್‍ಪೋರ್ಟ್ ಮುಂದೆ ಗುಂಪು ಚದುರಿಸಲು ತಾಲಿಬಾನಿಗಳು ಯದ್ವಾ ತದ್ವಾ ಗುಂಡು ಹಾರಿಸಿದ್ದಾರೆ. ಜನ ಪ್ರಾಣಭಯದಿಂದ ತತ್ತರಿಸಿ ಹೋಗಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್
Advertisement
ಮಹಿಳೆಯೊಬ್ಬರ ಆರ್ತನಾದ ಕೇಳಲಾಗದೇ ಏರ್‍ಪೋರ್ಟ್‍ನ ಮುಳ್ಳುತಂತಿ ಗೋಡೆಯ ಮೇಲೆ ಹತ್ತಿದ ಅಮೆರಿಕ ಸೈನಿಕರು, ಆ ಮಹಿಳೆ ಮತ್ತು ಮಗುವೊಂದನ್ನು ಏರ್‍ಪೋರ್ಟ್ ಒಳಗೆ ಎಳೆದುಕೊಂಡಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಒಂದು ಮಗುವನ್ನು ಅಮೆರಿಕ ಸೈನಿಕರು ಎತ್ತಿಕೊಳ್ಳುತ್ತಾರೆ. ಎಲ್ಲರಿಗೂ ಈ ಅದೃಷ್ಟ ದಕ್ಕಲ್ಲ ನೋಡಿ. ಹೀಗಾಗಿಯೇ ಕೆಲ ಆಫ್ಘನ್ ಪೋಷಕರು, ತಮ್ಮ ಮುಂದಿನ ತಲೆಮಾರಾದ್ರೂ ತಾಲಿಬಾನಿಗಳ ಕ್ರೂರದೃಷ್ಟಿಗೆ ಬೀಳದಿರಲಿ ಎಂದು ಏರ್‍ಪೋರ್ಟ್ ಕಾಂಪೌಂಡ್ ಬಳಿ ನಿಂತು ಮಕ್ಕಳನ್ನು ಒಳಗೆ ಎಸೆಯುತ್ತಿದ್ದಾರೆ. ಹೀಗೆ ಎಸೆಯುವಾಗ ಕೆಲ ಮಕ್ಕಳು ಮುಳ್ಳಿನ ತಂತಿಗೆ ಸಿಲುಕಿ ಒದ್ದಾಡೋದನ್ನು ನೋಡಲು ಆಗ್ತಿಲ್ಲ ಎಂದು ಅಧಿಕಾರಿಯೊಬ್ಬರು ಕಣ್ಣೀರು ಇಟ್ಟಿದ್ದಾರೆ.
ಈ ಮಧ್ಯೆ ಅಫ್ಘಾನಿಸ್ತಾನದ ಭಾಗ್ಲಾನ್, ಬಾನು ಸೇರಿ ಮೂರು ರಾಜ್ಯಗಳು ತಾಲಿಬಾನ್ ಕೈತಪ್ಪಿದೆ. ಅಲ್ಲಿನ ಸ್ಥಳೀಯರು ತಿರುಗಿಬಿದ್ದಿದ್ದು, ಭೀಕರ ಕಾಳಗದಲ್ಲಿ ಹಲವು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. ತಾಲಿಬಾನ್ – ಪಾಕ್ ಬಾಂಧವ್ಯ ಜಗಜ್ಜಾಹೀರಾಗಿದೆ. ತಾಲಿಬಾನ್ ಆಹ್ವಾನದ ಮೇರೆಗೆ ಪಾಕ್ ವಿದೇಶಾಂಗ ಸಚಿವರು ಭಾನುವಾರ ಕಾಬೂಲ್ ತೆರಳಲಿದ್ದಾರೆ.