ಕಿಂಗ್ಸ್‌ಟೌನ್: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ (T20WC SemiFinal) ಪ್ರವೇಶಿಸಿದೆ. ಆದ್ರೆ ವಿಶ್ವಕಪ್ ಸೆಮಿಸ್ ಪ್ರವೇಶಿಸುವ ಕನಸು ಕಂಡಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ.
Advertisement
ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ
Advertisement
Advertisement
ಚೇಸಿಂಗ್ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿತು. 6.3 ಓವರ್‌ಗಳಲ್ಲೇ 48 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಆರಂಭಿಕ ಆಟಗಾರ ಲಿಟ್ಟನ್ ದಾಸ್ 49 ಎಸೆತಗಳಲ್ಲಿ 54 ರನ್‌ಗಳಿಸಿ ನೆರವಾಗಿದ್ದರು. ಆದ್ರೆ ಸಹ ಆಟಗಾರರು ಉತ್ತಮ ಸಾಥ್ ನೀಡದ ಕಾರಣ ಬಾಂಗ್ಲಾ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ಪರ ರೆಹ್ಮಾನುಲ್ಲಾ ಗುರ್ಬಾಝ್ 55 ಎಸೆತಗಳಲ್ಲಿ 43 ರನ್, ರಶೀದ್ ಖಾನ್ 19 ರನ್, ಇಬ್ರಾಹಿಮ್ 18 ರನ್, ಅಝ್ಮತ್ತುಲ್ಲಾ ಒಮರ್ಝೈ 10 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ
ರಶೀದ್, ನವೀನ್ ಸಮಬಲ ಪ್ರದರ್ಶನ:
ಬಾಂಗ್ಲಾ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಮಾರಕ ದಾಳಿ ನಡೆಸಿದ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ಸಮಬಲ ಪ್ರದರ್ಶನ ಸಾಧಿಸಿದ್ದಾರೆ. ನವೀನ್ 3.5 ಓವರ್‌ಗಳಲ್ಲಿ 26 ರನ್ ಕೊಟ್ಟು 4 ವಿಕೆಟ್ ಕಿತ್ತರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 23 ರನ್ ಕೊಟ್ಟು 4 ವಿಕೆಟ್ ಉರುಳಿಸಿದರು. ಫಸಲ್‌ಹಕ್ ಫರೂಕಿ ಮತ್ತು ಗುಲ್ಬದೀನ್ ನೈಬ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ