ಕಾಬೂಲ್: ತಾಲಿಬಾನಿಗಳ ನರಬೇಟೆ ಮುಂದುವರಿದಿದ್ದು, ಪಂಜಶೀರ್ ದಲ್ಲಿರುವ ಹೋರಾಟಗಾರನ್ನು ಕೊಲ್ಲಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ನೂರಕ್ಕೂ ಹೆಚ್ಚು ತಾಲಿಬಾನಿಗಳ ಹಿಂಡು ಪಂಜಶೀರ್ ದತ್ತ ಪ್ರಯಾಣ ಬೆಳೆಸಿದೆ. ಇತ್ತ ಪಂಜಶೀರ್ ದತ್ತ ಪ್ರಯಾಣ ಬೆಳೆಸಿದ್ದ ಸುಮಾರು 300 ತಾಲಿಬಾನಿಗಳನ್ನು ಹೊಡೆದುರಿಳಿಸಲಾಗಿರುವ ಬಗ್ಗೆ ವರದಿಯಾಗಿದೆ.
ಪಂಜಶೀರ್ ದ ಹುಲಿ ಎಂದು ಕರೆಸಿಕೊಳ್ಳುವ ಅಹಮದ್ ಶಾ ಮಸೂದ್ ಪುತ್ರ 32 ವರ್ಷದ ಅಹಮದ್ ಶಾ, ನಮ್ಮ ಪ್ರಾಂತ್ಯವನ್ನು ತಾಲಿಬಾನಿಗಳಿಗೆ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 33 ಪ್ರಾಂತ್ಯಗಳನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ.
ಭಾನುವಾರ ಅಲ್-ಅರೇಬಿಯಾ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅಹಮದ್ ಮಸೂದ್, ನಾವು ಯುದ್ಧ ಮಾಡಲ್ಲ. ಆದ್ರೆ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ. ಒಂದು ವೇಳೆ ತಾಲಿಬಾನಿಗಳ ವರ್ತನೆ ಅತಿರೇಕಕ್ಕೆ ತಲುಪಿದ್ರೆ ಯುದ್ಧವೇ ನಡೆಯಲ್ಲ ಎಂದು ಹೇಳಲಾರೆ. ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ತಾಲಿಬಾನಿಗಳ ಮಾತುಕತೆ ಅವಶ್ಯಕವಾಗಿದೆ. ತಾಲಿಬಾನಿಗಳು ಮಾತುಕತೆಗೆ ಒಪ್ಪದಿದ್ರೆ ಯುದ್ಧ ನಮ್ಮ ಮುಂದಿನ ಆಯ್ಕೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಜಶೀರ್ ದಲ್ಲಿಯ ಜನರು ಒಗ್ಗಟ್ಟಾಗಿದ್ದು ದೇಶವನ್ನು ರಕ್ಷಿಸಬೇಕೆಂದು ಗುರಿ ಹೊಂದಿದ್ದಾರೆ. ವಿಸ್ತೀರ್ಣದಲ್ಲಿ ಪಂಜಶೀರ್ ಚಿಕ್ಕ ಪ್ರಾಂತ್ಯವಾಗಿರಬಹುದು. ಆದ್ರೆ ಇಲ್ಲಿರುವ ಎಲ್ಲರೂ ದೇಶದ ಜನರ ಶಾಂತಿಗಾಗಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಅಹಮದ್ ಮಸೂದ್ ಹೇಳಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್
ಸದ್ಯ ಪಂಜಶೀರ್ ದಲ್ಲಿ 10 ಸಾವಿರಕ್ಕೂ ಅಧಿಕ ಸೈನಿಕರಿದ್ದಾರೆ. ತಾಲಿಬಾನಿಗಳ ವಿರುದ್ಧದ ಹೋರಾಟಕ್ಕೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಮರೂಲ್ಲಾಹ ಸಾಲೇಹ ಮತ್ತು ಅಫ್ಘಾನಿಸ್ತಾನದ ವಾರ್ ಬೋರ್ಡ್ ಎಂದು ಕರೆಸಿಕೊಳ್ಳುವ ಜನರಲ್ ಅಬ್ದುಲ್ ರಶೀದ್ ಸಹ ಪಂಜಶೀರ್ ದಲ್ಲಿರುವ ಜನತೆಗೆ ಬೆಂಬಲ ನೀಡಿದ್ದಾರೆ. ಇದರ ಜೊತೆ ಅಶ್ರಫ್ ಘನಿ ಸರ್ಕಾರದ ರಕ್ಷಣಾ ಸಚಿವ ಜನರಲ್ ಬಿಸ್ಮಿಲ್ಲಾಹ ಮೊಹಮ್ಮದಿ ಸಹ ತಾವು ಪಂಜಶೀರ್ ನೊಂದಿಗೆ ಇರೋದಾಗಿ ಘೋಷಣೆ ಮಾಡಿದ್ದಾರೆ. ಹಾಗಾಗಿ ಪಂಜಶೀರ್ ಕ್ಕೆ ತಾಲಿಬಾನಿಗಳು ಎಂಟ್ರಿ ಸರಳವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು