ಇಸ್ಲಾಮಾಬಾದ್/ಕಾಬೂಲ್: ಪಾಕಿಸ್ತಾನ (Pakistan) ಈಗ ತಾಲಿಬಾನ್ ಆಳ್ವಿಕೆಯಲ್ಲಿರುವ ರಾಷ್ಟ್ರದೊಂದಿಗೆ ʻಮುಕ್ತ ಯುದ್ಧʼದಲ್ಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz sharif) ಘೋಷಿಸಿದ್ದಾರೆ.
ಗುರುವಾರ ರಾತ್ರಿ (ನಿನ್ನೆ) ತನ್ನ ಪಡೆಗಳು 19 ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳು (Pakistani Military Posts) ಮತ್ತು 2 ಸೇನಾ ನೆಲೆಗಳನ್ನ ವಶಪಡಿಸಿಕೊಂಡಿದೆ. ಇದರೊಂದಿಗೆ F-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ತಾಲಿಬಾನ್ ನೇತೃತ್ವದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಈ ಬೆನ್ನಲ್ಲೇ ಪಾಕ್ ಪ್ರಧಾನಿ ಮುಕ್ತ ಯುದ್ಧ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಅಫ್ಘಾನ್ ಮಿಲಿಟರಿ ದಾಳಿಗೆ 55 ಸೈನಿಕರು ಬಲಿ – ಪಾಕ್‌ನಿಂದ ಪ್ರತೀಕಾರದ ದಾಳಿ; 3 ಕಡೆ ಬಾಂಬ್ ಸ್ಫೋಟ

ಪಾಕಿಸ್ತಾನ ಈಗ ತಾಲಿಬಾನ್ (Taliban) ಆಳ್ವಿಕೆಯಲ್ಲಿರುವ ರಾಷ್ಟ್ರದೊಂದಿಗೆ ಮುಕ್ತ ಯುದ್ಧದಲ್ಲಿದೆ ಎಂದು ಘೋಷಿಸಿದ್ದಾರೆ. ಇತ್ತ ವಿವಾದಿತ ಡುರಾಂಡ್ ಲೈನ್‌ನ ಉದ್ದಕ್ಕೂ ಕಂದಹಾರ್ ಮತ್ತು ಹೆಲ್ಮಂಡ್‌ನಲ್ಲಿಯೂ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಆದ್ರೆ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತಲೂ 2 ಪಟ್ಟು ಹೆಚ್ಚಿದೆ: ಪಾಕ್‌ಗೆ ಭಾರತ ಗುದ್ದು

ಸಂಘರ್ಷ ಶುರುವಾಗಿದ್ದು ಹೇಗೆ?
ನಂಗರ್‌ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆ ಮಿಲಿಟರಿ ದಾಳಿ ನಡೆಸಿ, 55 ಪಾಕ್ ಸೈನಿಕರನ್ನ ಕೊಂದಿತ್ತು. 23 ಮಂದಿಯನ್ನ ಜೀವಂತ ಸೆರೆ ಹಿಡಿದೆ. ಡುರಾಂಡ್ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಸೇನಾ ಕೇಂದ್ರಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದ ಅಫ್ಘಾನ್ ಒಂದು ಪ್ರಧಾನ ಕಚೇರಿ ಮತ್ತು 19 ಔಟ್‌ಪೋಸ್ಟ್ ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಇಂದು ಬೆಳಗ್ಗೆ ವಾಯುದಾಳಿ ನಡೆಸಿದೆ. ಕಾಬೂಲ್ (Kabul), ಕಂದಹಾರ್ ಮತ್ತು ಪಕ್ತಿಯಾ ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ.
ದಾಳಿಯಲ್ಲಿ ಸಂಭಾವ್ಯ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಫ್ಘಾನ್ ಹೇಳಿದ್ರೆ, ಪಾಕಿಸ್ತಾನ ಅಪಾರ ಪ್ರಮಾಣದ ಹಾನಿ ಮಾಡಿರುವುದಾಗಿ ತಿಳಿಸಿದೆ. ತಾಲಿಬಾನ್ ನೆಲೆಗಳ ಮೇಳೇ ಆಫಾರ ಪ್ರಮಾಣ ಹಾನಿಯನ್ನು ನಮ್ಮ ಸೇನೆ ಮಾಡಿದೆ, 27 ತಾಲಿಬಾನ್ ಮಿಲಿಟರಿ ಪೋಸ್ಟ್‌ಗಳನ್ನ ಧ್ವಂಸಮಾಡಿದ್ದು, 9 ಪೋಸ್ಟ್‌ಗಳನ್ನ ವಶಪಡಿಸಿಕೊಂಡಿದೆ. ಕಾರ್ಯಾಚರಣೆಗಳಲ್ಲಿ 80 ಕ್ಕೂ ಹೆಚ್ಚು ಯುದ್ಧ ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು ನಾಶವಾಗಿವೆ ಎಂದು ಪಾಕಿಸ್ತಾನ ಪ್ರಧಾನಿ ಕಚೇರಿಯ ವಕ್ತಾರ ಮೊಷರಫ್ ಜೈದಿ ಹೇಳಿದ್ದಾರೆ.

