ಕಾಬೂಲ್: ತಾಲಿಬಾನಿಗಳ ಅಟ್ಟಹಾಸದ ಬಳಿಕ ಅಘ್ಘಾನಿಸ್ತಾನದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ನಡುವೆ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಅವಕಾಶವಿದ್ದರೆ ಅಂತಹ ವಿವಿಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯಬಹುದು ಎಂದು ಅಘ್ಘಾನಿಸ್ತಾನದ ಶಿಕ್ಷಣ ಸಚಿವ ಶೇಖ್ ಅಬ್ದುಲ್ ಬಕಿ ಹಕ್ಕಾನಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಅಘ್ಘಾನಿಸ್ತಾನದಲ್ಲಿ ಮಹಿಳೆಯರ ಶಿಕ್ಷಣ ಕುರಿತಾಗಿ ರೂಪಿಸಿರುವ ಹೊಸ ನಿಯಮಗಳನ್ನು ತಿಳಿಸಿರುವ ಹಕ್ಕಾನಿ, ಪುರುಷ ಮತ್ತು ಮಹಿಳೆಯರನ್ನು ಪ್ರತ್ಯೇಕವಾಗಿ ಕೂರಿಸಿ ಅವರ ಮಧ್ಯೆ ಪರದೆ ಹಾಕಿರುವ ವ್ಯವಸ್ಥೆ ಇದ್ದರೆ ಅಂತಹ ವಿವಿಗಳಲ್ಲಿ ಮಹಿಳಾ ಅಭ್ಯರ್ಥಿಗಳು ಶಿಕ್ಷಣ ಪಡೆಯಬಹುದು. ಪದವಿ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂಬ ನಿಯಮಾವಳಿ ರೂಪಿಸಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ
ಈ ಹಿಂದೆ ಅಫ್ಘಾನಿಸ್ತಾನ ವಶ ಪಡೆದುಕೊಂಡ ಬಳಿಕ ತಾಲಿಬಾನಿಗಳು ಮಹಿಳಾ ಶಿಕ್ಷಣದ ಬಗ್ಗೆ ದಿನಕ್ಕೊಂದು ಆದೇಶಗಳನ್ನು ಹೊರಡಿಸುತ್ತಿದ್ದರು. ಹುಡುಗ ಮತ್ತು ಹುಡುಗಿಯರು ಶಾಲೆಗಳಲ್ಲಿ ಜೊತೆಯಾಗಿ ಓದುವಂತಿಲ್ಲ. ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡುವ ಹಾಗಿಲ್ಲ. ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಶಿಕ್ಷಕಿಯರೇ ಪಾಠ ಮಾಡಬೇಕು ಎಂದು ಆದೇಶ ಹೊರಡಿಸಿಲಾಗಿತ್ತು. ಶೇಖ್ ಅಬ್ದುಲ್ ಬಾಕಿ ಹಕ್ಕಾನಿಯನ್ನು ಶಿಕ್ಷಣ ಸಚಿವ ಎಂದು ತಾಲಿಬಾನಿಗಳು ನೇಮಕ ಮಾಡಿದ್ದ ಬಳಿಕ ಇದೀಗ ಚರ್ಚೆ ನಡೆಸಿ ಪ್ರತ್ಯೇಕ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನದ ಪೂರ್ವ ಹೆರಾತ್ ನಗರದಲ್ಲಿ ಕೋ-ಎಜುಕೇಶನ್ ಮೇಲೆ ನಿರ್ಬಂಧ ಹಾಕಲಾಗಿತ್ತು. ಇದನ್ನೂ ಓದಿ: ಪ್ರಮಾಣವಚನ ಸ್ವೀಕಾರ ಸಮಾರಂಭವನ್ನೇ ರದ್ದುಗೊಳಿಸಿದ ತಾಲಿಬಾನ್ ಸರ್ಕಾರ