ಕಾಬೂಲ್: ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಫ್ಘಾನಿಸ್ತಾನ ಉಳಿಯಬೇಕೆಂದು ಆಗ್ರಹಿಸಿ ಫ್ರಂಟ್ ನಾರ್ದನ್ ಅಲೈನ್ಸ್ ಸಂಘಟನೆ ತಾಲಿಬಾನಿಗಳ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಗೆ ಇಳಿದಿದ್ದರು. ತಾಲಿಬಾನಿಗಳ ಸರ್ಪಗಾವಲು ಹಾಕಿದ್ರೂ ಅಫ್ಘನಿಸ್ತಾನದ ಧ್ವಜ ಹಾರಿಸಲಾಯ್ತು.
Advertisement
ಅಫ್ಘಾನಿಸ್ತಾನದ ರಾಜಕಾರಣಿ ದಿ.ಅಹ್ಮದ್ ಶಾ ಮಸೂದ್ ಪತ್ರನ ಮನವಿ ಮೇರೆ ಅಲ್ಲಿಯ ಸೈನಿಕರು ಪಂಜಶೀರ್ ತಲುಪುತ್ತಿದ್ದಾರೆ. ಜಲಾಲಾಬಾದ್ ನಲ್ಲಿಯೂ ಕೆಲ ಜನರು ಅಫ್ಘಾನಿಸ್ತಾನದ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಬಂದ ತಾಲಿಬಾನಿಗಳು ಧ್ವಜ ತೆಗೆಯಲು ಬಂದಾಗ ಜನ ವಿರೋಧಿಸಿದ್ದಕ್ಕೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
Advertisement
Advertisement
ಸದ್ಯ ಇರುವ ಧ್ವಜವನ್ನ ಬದಲಿಸಬಾರದು. ಇದನ್ನೇ ರಾಷ್ಟ್ರೀಯ ಧ್ವಜ ಎಂದು ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪಾಕಿಸ್ತಾನದ ಗಡಿ ಭಾಗದಲ್ಲಿರುವ ಅಫ್ಘಾನಿಗಳು ಸಹ ಧ್ವಜ ಹಾರಿಸುವ ಮೂಲಕ ತಾಲಿಬಾನಿಗಳ ನಡೆಯನ್ನು ಖಂಡಿಸಿದ್ದರು.
Advertisement
ಭಾರತಕ್ಕೆ ಇರುವ ಸವಾಲುಗಳು:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭಗೊಂಡಿದ್ದು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದೆ. ಲಷ್ಕರ್ ಇ ತೋಯ್ಬಾ, ಇಂಡಿಯನ್ ಮುಜಾಹಿದ್ದೀನ್ ಇನ್ನಷ್ಟು ಕೃತ್ಯಗಳಿಗೆ ಯತ್ನಿಸಬಹುದು.
ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಮಿಲಿಟರಿ, ಗುಪ್ತಚರ ಸಂಸ್ಥೆ ಐಎಸ್‍ಐ ನೇರ ಹಸ್ತಕ್ಷೇಪವಿದೆ. ಈಗಾಗಲೇ ತಾಲಿಬಾನಿಗಳಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಾಲಿಬಾನಿಗಳ ಆಡಳಿತದಲ್ಲಿ ಪಾಕಿಸ್ತಾನ ಇನ್ನಷ್ಟು ಬಾಲ ಬಿಚ್ಚಲು ಯತ್ನಿಸಬಹುದು. ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದಿದ್ದು ಅಮೆರಿಕಾ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಬೈಡನ್ ವಿರುದ್ಧ ಟ್ರಂಪ್ ವಾಗ್ದಾಳಿ
ತಾಲಿಬಾನಿಗಳ ಕೈವಶ ಬಳಿಕ ಅಫ್ಘಾನ್ ಬಗ್ಗೆ ಚೀನಾ ಆಸಕ್ತಿ ಹೆಚ್ಚಿಸಿಕೊಂಡಿದೆ. ಈಗಾಗಲೇ ತಾಲಿಬಾನ್ ಪರ ಸಾಫ್ಟ್ ಕಾರ್ನರ್ ತೋರಿಸಿರುವ ಚೀನಾ ರೈಲು, ಬೆಲ್ಟ್-ರೋಡ್ ಯೋಜನೆಗಳನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವ ಮೂಲಕ ಪ್ರಭಾವ ಬೀರಬಹುದು. ದಕ್ಷಿಣ ಏಷ್ಯಾದಲ್ಲಿ ಚೀನಾದ ಕುತಂತ್ರಗಳಿಗೆ ಅಫ್ಘಾನಿಸ್ತಾನವೂ ವೇದಿಕೆ ಆಗಬಹುದು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್