ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು

Public TV
2 Min Read
INDIA 1

ಕಾಬೂಲ್: ಅಫ್ಘಾನಿಸ್ತಾನದ ಸ್ಥಿತಿ ಘನಘೋರವಾಗಿದೆ. ಕಾಬೂಲ್‍ನಲ್ಲಿರೋ ಭಾರತೀಯರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಕಾಬೂಲ್‍ನಲ್ಲಿ ಸುಮಾರು 500ಕ್ಕೂ ಹೆಚ್ಚು ಭಾರತೀಯರಿದ್ದು, ಅವರನ್ನು ಕರೆತರಲು ಕಸರತ್ತು ನಡೆಸಲಾಗುತ್ತಿದೆ. ವಾಯುಸೇನೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಮುಂದಾಗಿದೆ. ಆದರೆ ಅಲ್ಲಿ ಏರ್ ಪೋರ್ಟ್  ಬಂದ್ ಆಗಿರುವ ಕಾರಣ ಏರ್ ಲಿಫ್ಟ್  ವಿಳಂಬಾಗಿದೆ.

TERROR

ಅಫ್ಘನ್‍ನಲ್ಲಿರುವ ಭಾರತೀಯರ ನ್ನು ಸುರಕ್ಷಿತವಾಗಿ ಕರೆತರಲು ಅಗತ್ಯವಾದ ಎಲ್ಲಾ ಕ್ರಮ ತೆಗೆದುಕೊಳ್ಳುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ. ಕಾಬೂಲ್‍ನಲ್ಲಿರೋ ರತನ್ ನಾಥ್ ದೇವಸ್ಥಾನದ ಅರ್ಚಕ ಪಂಡಿತ್ ರಾಜೇಶ್ ಕುಮಾರ್, ಭಾರತಕ್ಕೆ ಬರಲು ನಿರಾಕರಿಸಿದ್ದಾರೆ. ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ದೇವಸ್ಥಾನ ತೊರೆಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಅಫ್ಘನ್ ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಭಾಷಣ

india

ತಾಲಿಬಾನಿಗಳು ಬೇಕಿದ್ರೆ ತಮ್ಮನ್ನು ಕೊಲ್ಲಲ್ಲಿ ಅಂದಿದ್ದಾರೆ. ಕಾಬೂಲ್‍ನ ಗುರುದ್ವಾರದಲ್ಲಿ 200 ಸಿಖ್ಖರು ಇದ್ದು, ಅವರನ್ನು ರಕ್ಷಿಸಿ ಎಂದು ಪಂಜಾಬ್ ಸಿಎಂ ಮನವಿ ಮಾಡಿದ್ದಾರೆ. ನಾವಂದುಕೊಂಡಿದ್ದನ್ನು ಸಾಧಿಸಿದ್ದೇವೆ. ನಮ್ಮ ದೇಶಕ್ಕೆ, ನಮ್ಮ ಪ್ರಜೆಗಳಿಗೆ ಮತ್ತೆ ಸ್ವಾತಂತ್ರ್ಯ ಬಂದಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

afghan women 2

ಅಫ್ಘಾನಿಸ್ತಾನದಲ್ಲಿ ವಿಫಲ ಅನುಭವದ ರುಚಿಯನ್ನು ಮತ್ತೆ ನೋಡಲು ವಿದೇಶಿ ಶಕ್ತಿಗಳು ಬಯಸುವುದಿಲ್ಲ ಎಂದುಕೊಳ್ಳುತ್ತೇವೆ ಅಂತಾ ಅಮೆರಿಕಾಗೆ ತಾಲಿಬಾನ್ ಗುದ್ದು ನೀಡಿದ್ದಾರೆ. ಇದೀಗ ಎಲ್ಲರ ಕೋಪ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡ ಅಮೆರಿಕ ಅಧ್ಯಕ್ಷ ಜೋ ಬಿಡೆನ್‍ರತ್ತ ತಿರುಗಿದೆ. ಶ್ವೇತಭವನದ ಮುಂದೆ ಆಫ್ಘನ್ನರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

AMERICA

ತಾಲಿಬಾನ್ ಆಡಳಿತಕ್ಕೆ ಯಾವ ದೇಶವೂ ಮನ್ನಣೆ ಕೊಡಬಾರದು ಎಂದು ಬ್ರಿಟನ್ ಕೇಳಿಕೊಂಡಿದೆ. ಆದರೆ ಪಾಕಿಸ್ತಾನ ಮತ್ತು ಚೀನಾ ಮಾತ್ರ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವುದಾಗಿ ಘೋಷಿಸಿ ಉದ್ಧಟತನ ಮೆರೆದಿವೆ. ಇಮ್ರಾನ್ ಖಾನ್ ಅಂತೂ ಅಫ್ಘನ್‍ಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಅರ್ಥದ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

https://www.youtube.com/watch?v=ckd3p_Ra2VI

Share This Article
Leave a Comment

Leave a Reply

Your email address will not be published. Required fields are marked *